alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾ.ಪಂ. ಅಧ್ಯಕ್ಷೆಯನ್ನು ಜೀತಕ್ಕಿಟ್ಟುಕೊಂಡಿದ್ದ ಸದಸ್ಯ ಅರೆಸ್ಟ್

arest sun

ಮಡಿಕೇರಿ: ಗ್ರಾಮ ಪಂಚಾಯಿತಿ ಅಧ್ಯಕ್ಷೆಯನ್ನು ಜೀತಕ್ಕಿಟ್ಟುಕೊಂಡು ಆಕೆಗೆ ಬೆದರಿಸಿ, ತಾನೇ ಆಡಳಿತ ನಡೆಸುತ್ತಿದ್ದ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಕಣ್ಣಂಗಾಲ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಸ್.ಗೋಪಾಲಕೃಷ್ಣ ಬಂಧಿತ ಆರೋಪಿ.

ಗೋಪಾಲಕೃಷ್ಣ ತನ್ನ ಮನೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೈ.ಎಸ್.ಈಶ್ವರಿ ಅವರನ್ನು ಜೀತಕ್ಕಿಟ್ಟುಕೊಂಡಿದ್ದ. ಅಲ್ಲದೇ, ಅಧಿಕಾರ ಚಲಾಯಿಸಲು ಬಿಡದೇ ತಾನೇ ಅಧಿಕಾರ ನಡೆಸುತ್ತಿದ್ದ. ಈ ಕುರಿತು ಈಶ್ವರಿ ಅವರು, ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ ನಂತರ, ಆರೋಪಿ ಗೋಪಾಲಕೃಷ್ಣ ನಾಪತ್ತೆಯಾಗಿದ್ದ. ಹಾಸನ ಜಿಲ್ಲೆ ಗೊರೂರಿನಲ್ಲಿರುವ ಸಂಬಂಧಿಕರೊಬ್ಬರ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಗೋಪಾಲಕೃಷ್ಣನನ್ನು ಪೊಲೀಸರು ಬಂಧಿಸಿದ್ದಾರೆ.

ಗೋಪಾಲಕೃಷ್ಣ ತಮ್ಮ ಮನೆಯಲ್ಲಿ ಕೆಲಸಕ್ಕಿದ್ದ ಈಶ್ವರಿ ಅವರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದ್ದ. ಮೀಸಲಾತಿ ಕಾರಣದಿಂದ ಈಶ್ವರಿ, ಕಣ್ಣಂಗಾಲ ಗ್ರಾಮಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಆದರೆ, ಈಶ್ವರಿಗೆ ಅಧಿಕಾರ ನಡೆಸಲು ಆರೋಪಿ ಅವಕಾಶ ನೀಡಿರಲಿಲ್ಲ. ಮನೆಯಲ್ಲಿ ಜೀತಕ್ಕೆ ಇಟ್ಟುಕೊಂಡಿದ್ದ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...