alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರ ಕೈಗೆ ಸಿಕ್ಕಿಬಿದ್ದ ಕಾಮುಕ

ಬೆಂಗಳೂರು: ಕೊರಿಯರ್ ಕೊಡಲು ಬಂದು ಯುವತಿಯ ಎದುರು ಪ್ಯಾಂಟ್ ಜಿಪ್ ತೆಗೆದು, ಅಸಭ್ಯವಾಗಿ ವರ್ತಿಸಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.

ಸೈಯದ್ ಇರ್ಫಾನ್ ಬಂಧಿತ ಆರೋಪಿ. ಜಯನಗರದ 7 ನೇ ಹಂತದಲ್ಲಿ ನವೆಂಬರ್ 23 ರಂದು ಕೊರಿಯರ್ ಕೊಡಲು ಬಂದಿದ್ದ ಇರ್ಫಾನ್, ತಪ್ಪು ವಿಳಾಸಕ್ಕೆ ಬಂದಿದ್ದಾಗಿ ಹೇಳಿ ವಾಪಸ್ ತೆರಳಿದ್ದ.

ನಂತರದ ದಿನಗಳಲ್ಲಿ 4 ಸಲ ಮನೆಯ ಬಾಗಿಲು ಬಡಿದು ಯುವತಿ ಬಾಗಿಲು ತೆರೆಯುತ್ತಿದ್ದಂತೆ ಜಿಪ್ ತೆಗೆದು ಅಸಭ್ಯವಾಗಿ ವರ್ತಿಸಿದ್ದ.

ಮನೆಯಲ್ಲಿದ್ದ ಫ್ಯಾಷನ್ ಡಿಸೈನಿಂಗ್ ಓದುತ್ತಿರುವ ಉತ್ತರ ಭಾರತ ಮೂಲದ ಯುವತಿ ಹಾಗೂ ಖಾಸಗಿ ಕಂಪನಿಯೊಂದರ ಉದ್ಯೋಗಿ ಕಾಮುಕನ ಕಾಟಕ್ಕೆ ಬೇಸತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇರ್ಫಾನ್ ನನ್ನು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಆರೋಪಿಯ ಚಲನವಲನಗಳು ಸಿ.ಸಿ. ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯಗಳನ್ನಾಧರಿಸಿ ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...