alex Certify
ಕನ್ನಡ ದುನಿಯಾ       Mobile App
       

Kannada Duniya

ಲೈಂಗಿಕ ದೌರ್ಜನ್ಯ ಪ್ರಕರಣ : ಮತ್ತೊಬ್ಬ ಅರೆಸ್ಟ್

arest-ben

ಬೆಂಗಳೂರು: ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ಡಿಸೆಂಬರ್ 31 ರಂದು, ಮಧ್ಯರಾತ್ರಿ ಯುವತಿ ಮೇಲೆ, ಲೈಂಗಿಕ ದೌರ್ಜನ್ಯ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ.

ಜಾರ್ಜ್ ಪಪ್ಪಿ ಬಂಧಿತ ಆರೋಪಿ. ಆನೇಕಲ್ ನಲ್ಲಿ ತಲೆ ಮರೆಸಿಕೊಂಡಿದ್ದ ಜಾರ್ಜ್ ಪಪ್ಪಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎಲೆಕ್ಟ್ರಿಷಿಯನ್ ವೃತ್ತಿ ಮಾಡಿಕೊಂಡಿದ್ದ ಆರೋಪಿ, ಘಟನೆಯ ಸಂದರ್ಭದಲ್ಲಿ ಬೈಕ್ ನಲ್ಲಿದ್ದ ದೃಶ್ಯ ಸಿ.ಸಿ. ಟಿ.ವಿ.ಯಲ್ಲಿ ಸೆರೆಯಾಗಿತ್ತು.

ದೇಶಾದ್ಯಂತ ಸುದ್ದಿಯಾಗಿದ್ದ ಈ ಪ್ರಕರಣದಲ್ಲಿ ಈಗಾಗಲೇ ಐವರನ್ನು ಬಂಧಿಸಲಾಗಿದೆ. ಅಯ್ಯಪ್ಪ, ಲಿನೋ, ಸೋಮಶೇಖರ್, ಸುದೇಶ್, ಜೇಮ್ಸ್ ಎಂಬುವವರನ್ನು ಹಿಂದೆಯೇ ಪೊಲೀಸರು ಬಂಧಿಸಿದ್ದಾರೆ.

ಈಗ ಆನೇಕಲ್ ನಲ್ಲಿ ಸ್ನೇಹಿತನ ಮನೆಯಲ್ಲಿದ್ದ ಜಾರ್ಜ್ ಪಪ್ಪಿಯನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಡೋನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಜನಾಂಗೀಯ ದ್ವೇಷ ಹೆಚ್ಚಾಗುತ್ತಿದೆಯೇ..?

    View Results

    Loading ... Loading ...