alex Certify
ಕನ್ನಡ ದುನಿಯಾ       Mobile App
       

Kannada Duniya

ಹಣದೊಂದಿಗೆ ಪರಾರಿಯಾಗಿದ್ದ ಚಾಲಕ ಡೋಮ್ನಿಕ್ ಅರೆಸ್ಟ್

arest-tu

ಬೆಂಗಳೂರು: ಎ.ಟಿ.ಎಂ.ಗೆ ತುಂಬಬೇಕಿದ್ದ 1.37 ಕೋಟಿ ರೂ. ಹಣದೊಂದಿಗೆ, ಪರಾರಿಯಾಗಿದ್ದ ಚಾಲಕ ಡೋಮ್ನಿಕ್ ರಾಯ್ ನನ್ನು ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ 23 ರಂದು ಮಧ್ಯಾಹ್ನ 1.30 ಕ್ಕೆ ಕೆ.ಜಿ.ರಸ್ತೆಯ ಬ್ಯಾಂಕ್ ಆಫ್ ಇಂಡಿಯಾ ಎ.ಟಿ.ಎಂ. ನಿಂದ ಡೋಮ್ನಿಕ್ ಹಣದ ಸಮೇತ ಪರಾರಿಯಾಗಿದ್ದ. ಮಾರನೇ ದಿನ ಮೌಂಟ್ ಕಾರ್ಮೆಲ್ ಕಾಲೇಜ್ ಬಳಿ ವಾಹನ ಪತ್ತೆಯಾಗಿದ್ದು, ಅದರಲ್ಲಿ 45 ಲಕ್ಷ ರೂ. ಹಾಗೂ ಗನ್ ಇತ್ತು. ಉಳಿದ ಹಣದೊಂದಿಗೆ ಪತ್ನಿ ಎಲ್ವಿನ್ ಹಾಗೂ ಪುತ್ರನೊಂದಿಗೆ ಡೋಮ್ನಿಕ್ ತಲೆಮರೆಸಿಕೊಂಡಿದ್ದ.

ನವೆಂಬರ್ 27 ರಂದು ಡೋಮ್ನಿಕ್ ಪತ್ನಿ ಎಲ್ವಿನ್ ಬಂಧಿಸಿದ್ದ ಪೊಲೀಸರು, ಆಕೆ ಬಳಿ ಇದ್ದ 79.08 ಲಕ್ಷ ರೂ. ಜಪ್ತಿ ಮಾಡಿದ್ದರು. ಇಂದು ಕೆ.ಆರ್. ಪುರಂ ಟಿನ್ ಫ್ಯಾಕ್ಟರಿ ಬಳಿ ಕಾರ್ಯಾಚರಣೆ ನಡೆಸಿದ ಉಪ್ಪಾರಪೇಟೆ ಠಾಣೆ ಪೊಲೀಸರು, ಸ್ನೇಹಿತನನ್ನು ಭೇಟಿ ಮಾಡಲು ಬಂದಿದ್ದ ಡೋಮ್ನಿಕ್ ನನ್ನು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...