alex Certify
ಕನ್ನಡ ದುನಿಯಾ       Mobile App
       

Kannada Duniya

ಇಬ್ಬರು ಸಮುದ್ರ ಪಾಲು, 14 ಮಂದಿ ರಕ್ಷಣೆ

apsarakonda

ಕಾರವಾರ: ಈಜಲು ಹೋಗಿದ್ದ 16 ಮಂದಿ ನೀರಿನ ಸೆಳೆತಕ್ಕೆ ಸಿಲುಕಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಅಪ್ಸರಕೊಂಡದಲ್ಲಿ ನಡೆದಿದೆ.

ಇಡಗುಂಜಿ ದೇವಾಲಯಕ್ಕೆ ಬಂದಿದ್ದ 16 ಮಂದಿ ಅಪ್ಸರಕೊಂಡದ ಬಳಿ ಈಜಾಡಲು ಸಮುದ್ರಕ್ಕೆ ಇಳಿದ ಸಂದರ್ಭದಲ್ಲಿ ಅಲೆಗಳ ಸೆಳೆತಕ್ಕೆ ಸಿಲುಕಿದ್ದಾರೆ.

ಸ್ಥಳೀಯರು 14 ಮಂದಿಯನ್ನು ರಕ್ಷಿಸಿದ್ದು, ಇಬ್ಬರು ನೀರು ಪಾಲಾಗಿದ್ದಾರೆ. ಜಯಂತ್(23), ನೈವೇಶ್(22) ನೀರು ಪಾಲಾದವರು ಎನ್ನಲಾಗಿದೆ.

ಸ್ಥಳಕ್ಕೆ ಹೊನ್ನಾವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ನೆರವಿನಿಂದ ನೀರು ಪಾಲಾದ ಇಬ್ಬರ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...