alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿಗೆ ಕಾರಣವಾಯ್ತು ಸೇಬು

ಚಿಕ್ಕಬಳ್ಳಾಪುರ: ಗಂಟಲಲ್ಲಿ ಸೇಬಿನ ಚೂರು ಸಿಕ್ಕಿಕೊಂಡು ಬಾಲಕ ಮೃತಪಟ್ಟ ದಾರುಣ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ನಕ್ಕಲಕುಂಟೆ ಶಾಂತಿ ನಗರದ ಆಸೀಫ್(11) ಮೃತಪಟ್ಟ ಬಾಲಕನಾಗಿದ್ದಾನೆ. ಕಾಲಿಗೆ ಪೆಟ್ಟು ಮಾಡಿಕೊಂಡು ಜ್ವರದಿಂದ ಬಳಲುತ್ತಿದ್ದ ಆಸೀಫ್ ಚಿಕಿತ್ಸೆ ಪಡೆದುಕೊಂಡು ಮನೆಯಲ್ಲಿದ್ದ.

ಆತ ಶನಿವಾರ ಬೆಳಿಗ್ಗೆ ಸೇಬು ಹಣ್ಣು ತಿನ್ನುವಾಗ ಒಮ್ಮೆಲೆ ಕುಸಿದು ಬಿದ್ದು, ಸಾವನ್ನಪ್ಪಿದ್ದಾನೆ. ಆಸೀಫ್ ಸಾವಿನ ಕುರಿತು ಅನುಮಾನಗೊಂಡ ಆತನ ತಂದೆ ಕಿಜರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಮರಣೋತ್ತರ ಪರೀಕ್ಷೆಯಲ್ಲಿ ಗಂಟಲಲ್ಲಿ ಸೇಬು ಹಣ್ಣಿನ ಚೂರು ಸಿಕ್ಕಿ ಹಾಕಿಕೊಂಡು ಬಾಲಕ ಮೃತಪಟ್ಟಿರುವುದು ಗೊತ್ತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...