alex Certify
ಕನ್ನಡ ದುನಿಯಾ       Mobile App
       

Kannada Duniya

ಪೂಜೆ ಹೆಸರಿನಲ್ಲಿ ನಟಿಯ ಲಕ್ಷಾಂತರ ರೂ. ಗಳಿಗೆ ಪಂಗನಾಮ

ಬೆಂಗಳೂರು: ಸಹ ನಿರ್ಮಾಪಕರೊಬ್ಬರು ಚಿತ್ರರಂಗದಲ್ಲಿ ಖ್ಯಾತಿ ಗಳಿಸಬೇಕೆಂದರೆ ವಿಶೇಷ ಪೂಜೆ ಮಾಡಿಸಬೇಕೆಂದು ಹೇಳಿ ವಂಚಿಸಿರುವ ಘಟನೆ ಸ್ಯಾಂಡಲ್ ವುಡ್ ನಲ್ಲಿ ನಡೆದಿದೆ.

ಈ ಕುರಿತು ವಂಚನೆಗೊಳಗಾದ ನಟಿ ಚೇತನಾ ಸಹ ನಿರ್ಮಾಪಕ ನಾಗೇಶ್ ವಿರುದ್ಧ ಗಿರಿನಗರ ಪೊಲೀಸ್ ಠಾನೆಯಲ್ಲಿ ದೂರು ದಾಖಲಿಸಿದ್ದಾರೆ. ಚೇತನಾ ಕೆಲ ವರ್ಷಗಳ ಹಿಂದೆ ಸೆಟ್ಟೇರಿದ್ದ ವಿ. ರವಿಚಂದ್ರನ್ ಅಭಿನಯ ಹಾಗೂ ನಿರ್ದೇಶನದ ಮಂಜಿನ ಹನಿ ಚಿತ್ರದಲ್ಲಿ ನಾಯಕನ ತಂಗಿ ಪಾತ್ರ ಮಾಡುತ್ತಿದ್ದರು. ಇದೇ ಚಿತ್ರಕ್ಕೆ ನಾಗೇಶ್ ಸಹ ನಿರ್ಮಾಪಕರಾಗಿದ್ದರು. ಈ ಸಿನಿಮಾ ಅರ್ಧದಲ್ಲಿಯೇ ನಿಂತುಹೋಗಿತ್ತು. ಹೀಗೆ ಚೇತನಾ ಹಾಗೂ ಸಹ ನಿರ್ಮಾಪಕ ನಾಗೇಶ್ ಪರಿಚಯ ಆರಂಭವಾಗಿತ್ತು.

ಸಿನಿಮಾ ರಂಗದಲ್ಲಿ ದೊಡ್ಡಮಟ್ಟಕ್ಕೆ ಬೆಳೆಯಬೇಕು, ಹೆಸರು ಮಾಡಬೇಕೆಂದರೆ ಗೌರಿ ಎಂಬಾಕೆಯನ್ನು ಭೇಟಿಯಾಗುವಂತೆ ನಾಗೇಶ್ ಚೇತನಾಳಿಗೆ ತಿಳಿಸಿದ್ದಾನೆ. ಗೌರಿಯನ್ನು ಸಂಪರ್ಕಿಸಿದಾಗ ನಿನಗೆ ದೋಷವಿದ್ದು, ನಿನ್ನಹೆಸರಲ್ಲಿ ಪೂಜೆ ಮಾಡಬೇಕು ಹಾಗೂ ಮಗುವನ್ನು ಬಲಿಕೊಡಬೇಕು ಇದರಿಂದ ನಿನಗೆ ಒಳ್ಳೆ ಹೆಸರು, ಒಳ್ಳೆಯ ಅವಕಾಶಗಳು ಬರುತ್ತೆ ಎಂದು ನಂಬಿಸಿ ಮೂರು ವರ್ಷಗಳಿಂದ ನಿರಂತರವಾಗಿ ಹಣ ಸುಲಿಗೆ ಮಾಡಿದ್ದಾರೆ. ಸುಮಾರು ಎಂಟೂವರೆ ಲಕ್ಷ ರೂ. ಹಣ ಪಡೆದು ಮೋಸ ಮಾಡಿದ್ದಾರೆ. ಹಣ ದೋಚುವುದು ಮುಗಿದ ಬಳಿಕ ಈಗ ತಲೆಮರೆಸಿಕೊಂಡಿದ್ದಾರೆ. ವಂಚನೆಗೊಳಗಾದ ನಟಿ ಚೇತನಾ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಹ ನಿರ್ಮಾಪಕ ನಾಗೇಶ್ ಹಾಗೂ ಗೌರಿ ಎಂಬಾಕೆಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...