alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿ ಜತೆ ಏರ್ ಏಷ್ಯಾ ಸಿಬ್ಬಂದಿ ಅಸಭ್ಯ ವರ್ತನೆ

ಬೆಂಗಳೂರು: ದೆಹಲಿ ವಿಮಾನ ನಿಲ್ದಾಣದಲ್ಲಿ ಏರ್ ಏಷ್ಯಾ ಸಿಬ್ಬಂದಿ ಅನುಚಿತ ವರ್ತನೆ ತೋರಿದ ಘಟನೆ ಮಾಸುವ ಮೊದಲೇ, ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ರಾಂಚಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಯುವತಿಯೊಂದಿಗೆ ಏರ್ ಏಷ್ಯಾ ಸಿಬ್ಬಂದಿ ಅನುಚಿತವಾಗಿ ವರ್ತಿಸಿ, ಬೆದರಿಕೆ ಹಾಕಿದ್ದು, ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಟಾಯ್ಲೆಟ್ ಕ್ಲೀನ್ ಆಗಿಲ್ಲ, ಸ್ವಚ್ಚಗೊಳಿಸಿ ಎಂದು ಹೇಳಿದ್ದಕ್ಕೆ ಬೆದರಿಕೆ ಹಾಕಿದ ಸಿಬ್ಬಂದಿ, ಇದು ನನ್ನ ವಿಮಾನ. ಹೋಗಿ ಕುಳಿತುಕೊಳ್ಳಿ ಎಂದು ಹೇಳಿದ್ದಾನೆ. ಬಳಿಕ ಬೆಂಗಳೂರಿನಲ್ಲಿ ವಿಮಾನ ಇಳಿಯುವ ಸಂದರ್ಭದಲ್ಲಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಯುವತಿ ದೂರಿದ್ದಾರೆ.

ನವೆಂಬರ್ 3 ರಂದು ಯುವತಿ ರಾಂಚಿಯಿಂದ ಬೆಂಗಳೂರಿಗೆ ಏರ್ ಏಷ್ಯಾ ವಿಮಾನದಲ್ಲಿ ಹೊರಟಿದ್ದಾರೆ. ವಿಮಾನ ಹೈದರಾಬಾದ್ ಗೆ ಬರುವ ವೇಳೆಗೆ ಯುವತಿಗೆ ಬೆದರಿಕೆ ಹಾಕಿದ್ದ ಸಿಬ್ಬಂದಿ ಬಲವಂತವಾಗಿ ಆಕೆಯ ಫೋಟೋ ತೆಗೆದುಕೊಂಡಿದ್ದಾನೆ.

ರಾತ್ರಿ 1 ಗಂಟೆಗೆ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೆಲ್ಲಾ ಇಳಿದು ಹೋದ ನಂತರ ಯುವತಿಯನ್ನು ಪಕ್ಕಕ್ಕೆ ಎಳೆದೊಯ್ದ ಮೂವರು ಸಿಬ್ಬಂದಿ, ಸಾರಿ ಕೇಳುವಂತೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಯುವತಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...