alex Certify
ಕನ್ನಡ ದುನಿಯಾ       Mobile App
       

Kannada Duniya

ಮತಯಾಚನೆಗೆ ಬಂದ ಅಭ್ಯರ್ಥಿಗೆ ಮತದಾರ ಕೊಟ್ಟಿದ್ದೇನು ಗೊತ್ತಾ…?

ಕಾರವಾರ: ಚುನಾವಣೆ ಸಂದರ್ಭದಲ್ಲಿ ಮತದಾರರನ್ನು ಓಲೈಸಿಕೊಳ್ಳಲು ಅಭ್ಯರ್ಥಿಗಳು ಹಣ ಹಂಚುತ್ತಾರೆ ಎನ್ನುವುದು ಸಾಮಾನ್ಯ ಸಂಗತಿ. ಆದರೆ, ಮತಯಾಚನೆಗೆ ಬಂದಿದ್ದ ಅಭ್ಯರ್ಥಿಗೇ ಮತದಾರರೊಬ್ಬರು ಹಣ ಕೊಟ್ಟ ಅಪರೂಪದ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆ ಅಂಕೋಲಾದಲ್ಲಿ ನಡೆದಿದೆ.

ಜೆ.ಡಿ.ಎಸ್. ಅಭ್ಯರ್ಥಿ ಆನಂದ್ ಆಸ್ನೋಟಿಕರ್ ಅಂಕೋಲಾದ ಲಕ್ಷ್ಮೀಶ್ವರ ನಗರದಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದ್ದು, ಪ್ರಕಾಶ್ ನಾಯ್ಕ್ ಅವರ ಮನೆಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಪ್ರಕಾಶ್ ಅವರು 500 ರೂ. ನೋಟನ್ನು ಆನಂದ್ ಆಸ್ನೋಟಿಕರ್ ಅವರಿಗೆ ಕೊಟ್ಟಿದ್ದಾರೆ. ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅವರು ಈ ರೀತಿ ಮಾಡಿದ್ದಾರೆ.

ಹಣ ಮತ್ತಿತರ ಆಮಿಷಕ್ಕೆ ಬಲಿಯಾಗದೇ ಸ್ವತಂತ್ರವಾಗಿ ಮತ ಚಲಾಯಿಸಬೇಕು. ಮತದಾರರಿಗೆ ಹಣ ಹಂಚುವುದು ನಿಲ್ಲಬೇಕು ಎಂದು ಜಾಗೃತಿ ಮೂಡಿಸಿಲು ಪ್ರಕಾಶ್ ಅವರು ಅಭ್ಯರ್ಥಿಗೇ ಹಣ ಕೊಟ್ಟಿದ್ದು, ಈ ವಿಚಾರವೀಗ ಗಮನಸೆಳೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...