alex Certify
ಕನ್ನಡ ದುನಿಯಾ       Mobile App
       

Kannada Duniya

12 ಮಕ್ಕಳಿಗೆ ದನದ ಇಂಜೆಕ್ಷನ್ ಕೊಟ್ಟ ನಕಲಿ ನರ್ಸ್

injection

ದನಗಳಿಗೆ ಬಳಸುವ ಚುಚ್ಚುಮದ್ದನ್ನು ಮಕ್ಕಳಿಗೆ ಚುಚ್ಚಿದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ನಕಲುಗುಡ್ಡ ಎಂಬ ಗ್ರಾಮದಲ್ಲಿ ನಡೆದಿದೆ. ತನ್ನನ್ನು ನರ್ಸ್ ಎಂದು ಹೇಳಿಕೊಂಡ ಮಾನಸಿಕ ಅಸ್ವಸ್ಥೆ ಹೀಗೆ ಚುಚ್ಚುಮದ್ದು ನೀಡಿದ್ದು, ಮಕ್ಕಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಗ್ರಾಮದ ನಿವಾಸಿ 13 ವರ್ಷದ ಶೈಲಜಾ ಮಾನಸಿಕ ಅಸ್ವಸ್ಥೆಯಾಗಿದ್ದು, ಭಾನುವಾರ ಹಳ್ಳಿಯಲ್ಲಿ ನರ್ಸ್ ಗಳು, ವೈದ್ಯರು ಪಲ್ಸ್ ಪೋಲಿಯೋ ಹಾಕುವುದನ್ನು ನೋಡಿ ತಾನೂ ನರ್ಸ್ ಎಂದು ಭಾವಿಸಿದ್ದಾಳೆ. ಮಕ್ಕಳಿಗೆ ಇಂಜೆಕ್ಷನ್ ಮಾಡುತ್ತೇನೆ ಎಂದು ಹೇಳಿ ದನಗಳಿಗೆ ಬಳಸುವ ಇಂಜೆಕ್ಷನ್ ಅನ್ನು 12 ಮಕ್ಕಳಿಗೆ ಚುಚ್ಚಿದ್ದಾಳೆ. ಇದರಿಂದಾಗಿ ಅಸ್ವಸ್ಥರಾಗಿರುವ ಮಕ್ಕಳನ್ನು ಕೋಲಾರದ ಆರ್. ಎಲ್. ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಗಿದೆ. ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.

ಕೋಲಾರ ಜಿಲ್ಲಾಧಿಕಾರಿ ಘಟನೆಯ ತನಿಖೆಗೆ ಆದೇಶಿಸಿದ್ದಾರೆ. ಮಾನಸಿಕ ಅಸ್ವಸ್ಥೆಗೆ ಇಂಜೆಕ್ಷನ್, ಸಿರಿಂಜ್ ಕೊಟ್ಟಿದ್ಯಾರು ಎಂಬ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...