alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಾಣಿಗಳಿಗೆ ಆಸರೆಯಾಗಿದ್ದಾರೆ ಬಾಗಲಕೋಟೆ ವ್ಯಕ್ತಿ

ghanashyamಬಾಗಲಕೋಟೆಯ ಬೇಸಿಗೆ ಬಿಸಿಲು ಎಲ್ಲರಿಗೂ ತಿಳಿದೇ ಇದೆ. ಬೇಸಿಗೆಯಲ್ಲಿ ಹೆಚ್ಚಾಗುವ ಉಷ್ಣಾಂಶದಿಂದ ಮನುಷ್ಯ, ಮೂಕಪ್ರಾಣಿಗಳಾದಿಯಾಗಿ ಎಲ್ಲರೂ ತಲ್ಲಣಗೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಪ್ರಾಣಿಗಳಿಗೆ ಆಹಾರವಿರಲಿ, ನೀರಾದರೂ ಸಿಕ್ಕರೆ ಸಾಕು ಎಂಬಂತಾಗಿರುತ್ತದೆ.

ಆದರೆ ಬಾಗಲಕೋಟೆಯ ಘನಶ್ಯಾಂ ಭಾಂಡೆಗೆ ಎಂಬುವವರು ಮೂಕ ಪ್ರಾಣಿಗಳ ಹಸಿವು, ದಾಹ ತಣಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಘನಶ್ಯಾಂ ಪ್ರತಿ ದಿನ ನವನಗರ ಪ್ರದೇಶದ 33 ಬೀದಿ ನಾಯಿ ಹಾಗೂ 18 ಆಕಳುಗಳಿಗೆ ಆಹಾರ, ನೀರು ನೀಡುತ್ತಾರೆ.

ಆಕಳುಗಳಿಗೆ ಮೇವು ದಂಟು ಖರೀದಿಸಿ ತಿನ್ನಿಸುತ್ತಾರೆ. ಜೊತೆಗೆ ರೊಟ್ಟಿ, ಅನ್ನ ನೀಡುತ್ತಾರೆ. ನಾಯಿಗಳಿಗೆ ಪ್ರತಿ ದಿನ 10 ಪೌಂಡ್ ಬ್ರೆಡ್, 6 ಲೀ. ಹಾಲು ನೀಡುತ್ತಿದ್ದಾರೆ. ಅಲ್ಲಲ್ಲಿ ನೀರಿಟ್ಟು ಪ್ರಾಣಿಗಳ ಬಾಯಾರಿಕೆ ತಣಿಸುತ್ತಾರೆ. ಈ ರೀತಿ ಮೂಕ ಪ್ರಾಣಿಗಳಿಗೆ ಆಹಾರ, ನೀರಿನ ವ್ಯವಸ್ಥೆ ಮಾಡುವ ಮೂಲಕ ಸಾರ್ಥಕ ಕಾರ್ಯ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...