alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಮಕ್ಕಳನ್ನು ಅಂಗನವಾಡಿಯಲ್ಲೇ ಬಿಟ್ಟು ಬೀಗ ಹಾಕಿಕೊಂಡು ಹೋದ ಸಿಬ್ಬಂದಿ

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಇಬ್ಬರು ಮಕ್ಕಳು ಕೊಠಡಿಯೊಳಗೆ ಇರುವುದನ್ನು ಗಮನಿಸದೆ ಬೀಗ ಹಾಕಿಕೊಂಡು ಹೋಗಿದ್ದ ಘಟನೆ ಬೆಳಗಾವಿ ಜಿಲ್ಲೆ ಎಂ.ಕೆ. ಹುಬ್ಬಳ್ಳಿ ಸಮೀಪದ ದಾಸ್ತಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಗುರುವಾರದಂದು ತಮ್ಮ ಕೆಲಸ ಮುಗಿಸಿದ ಕಾರ್ಯಕರ್ತೆ ಶೋಭಾ ಕೋಲಕಾರ ಹಾಗೂ ಸಹಾಯಕಿ ಮಹಾದೇವಿ, ಅಂಗನವಾಡಿ ಒಳಗೆ ಇನ್ನೂ ಇಬ್ಬರು ಮಕ್ಕಳು ಇರುವುದನ್ನು ಗಮನಿಸದೆ ಬೀಗ ಹಾಕಿಕೊಂಡು ತೆರಳುವ ಮೂಲಕ ನಿರ್ಲಕ್ಷ ಮೆರೆದಿದ್ದಾರೆ.

ಮಕ್ಕಳು ಅಳುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಅಂಗನವಾಡಿ ಎದುರು ಜಮಾಯಿಸಿದ್ದಲ್ಲದೆ ಕಾರ್ಯಕರ್ತೆ ಶೋಭಾ ಕೋಲಕಾರ ಹಾಗೂ ಸಹಾಯಕಿ ಮಹಾದೇವಿ ಅವರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.

ಬಳಿಕ ಬೀಗ ತೆಗೆದು ಮಕ್ಕಳನ್ನು ಪೋಷಕರ ಸುಪರ್ದಿಗೆ ಒಪ್ಪಿಸಿದ್ದು, ನಿರ್ಲಕ್ಷದ ವರ್ತನೆ ತೋರಿದ್ದಕ್ಕಾಗಿ ಅಂಗನವಾಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...