alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ಬೇಸಿಗೆ ರಜೆ ನಿರೀಕ್ಷೆಯಲ್ಲಿದ್ದ ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಮೇ 2 ನೇ ವಾರದಲ್ಲಿ ನೀಡಲಾಗುತ್ತಿದ್ದ 15 ದಿನಗಳ ಬೇಸಿಗೆ ರಜೆಯನ್ನು ನೀಡದಿರುವ ಸಾಧ್ಯತೆ ಇದೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಮಾತೃಪೂರ್ಣ ಯೋಜನೆ ಕಾರಣದಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಬೇಸಿಗೆ ರಜೆ ಸಿಗುವ ಸಾಧ್ಯತೆ ಇಲ್ಲವಾಗಿದೆ.

ಗರ್ಭಿಣಿಯರು ಮತ್ತು ಬಾಣಂತಿಯರಿಗಾಗಿ ಮಾತೃಪೂರ್ಣ ಯೋಜನೆ ಜಾರಿಗೆ ತರಲಾಗಿದ್ದು, ಮಕ್ಕಳಿಗೆ ರಜೆ ಇದ್ದರೂ, ಗರ್ಭಿಣಿಯರು ಮತ್ತು ಬಾಣಂತಿಯರು ಊಟಕ್ಕೆ ಬರುವುದರಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ರಜೆ ಸಿಗುವುದಿಲ್ಲ.

ಕಳೆದ ವರ್ಷ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದ ತಾಲ್ಲೂಕುಗಳಲ್ಲಿ ಬೇಸಿಗೆ ರಜೆ ನೀಡಿರಲಿಲ್ಲ. ಈಗ ರಾಜ್ಯಾದ್ಯಂತ ಯೋಜನೆ ಜಾರಿಯಲ್ಲಿದ್ದು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಬೇಸಿಗೆ ರಜೆ ಸಿಗದಿರುವ ಸಾಧ್ಯತೆ ಇದೆ.

ತಮಗೆ 15 ದಿನಗಳ ಬೇಸಿಗೆ ರಜೆ ನೀಡಬೇಕೆಂಬ ಬೇಡಿಕೆ ಕಾರ್ಯಕರ್ತೆಯರಿಂದ ಕೇಳಿ ಬಂದಿದೆ. ಸಹಾಯಕಿಯರಿಗೆ 15 ದಿನ, ಕಾರ್ಯಕರ್ತೆಯರಿಗೆ 15 ದಿನ ರಜೆ ನೀಡಬೇಕೆಂಬ ಚಿಂತನೆ ಕೂಡ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...