alex Certify
ಕನ್ನಡ ದುನಿಯಾ       Mobile App
       

Kannada Duniya

ಅನಂತ ಕುಮಾರ್ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುವ ಗಣ್ಯರ ಪಟ್ಟಿ ಬಿಡುಗಡೆ

ಸೋಮವಾರದಂದು ವಿಧಿವಶರಾದ ಕೇಂದ್ರ ಸಚಿವ ಅನಂತಕುಮಾರ್ ಅವರ ಅಂತ್ಯ ಸಂಸ್ಕಾರ ಇಂದು ಮಧ್ಯಾಹ್ನ, ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ವಿಧಿವಿಧಾನಗಳಂತೆ ನೆರವೇರಲಿದೆ.

ಅಂತಿಮ ವಿಧಿವಿಧಾನಗಳನ್ನು ಅನಂತಕುಮಾರ್ ಅವರ ಸಹೋದರ ನಂದ ಕುಮಾರ್ ನೆರವೇರಿಸಲಿದ್ದು, ಪುರೋಹಿತ ಶ್ರೀನಾಥ್ ಮತ್ತು ತಂಡ ಈ ಕಾರ್ಯ ನಡೆಸಿಕೊಡಲಿದೆ. ಅನಂತ ಕುಮಾರ್ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುತ್ತಿರುವ ಗಣ್ಯರ ಪಟ್ಟಿ ಈಗ ಬಿಡುಗಡೆಯಾಗಿದೆ.

ರಾಜ್ಯಪಾಲ ವಜುಭಾಯ್ ವಾಲಾ, ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅದ್ವಾನಿ, ಕೇಂದ್ರ ಸಚಿವರುಗಳಾದ ರಾಜನಾಥ ಸಿಂಗ್, ನಿರ್ಮಲಾ ಸೀತಾರಾಮನ್, ಸದಾನಂದ ಗೌಡ, ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವಡೇಕರ್, ಪಿಯುಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ರಾಧಾ ಮೋಹನ್ ಸಿಂಗ್, ತಾವರ್ ಚಂದ್ ಗೆಹ್ಲೋಟ್, ಡಾ. ಹರ್ಷವರ್ಧನ್, ಮಹೇಶ್ ಶರ್ಮ, ರಮೇಶ್ ಜಿಗಜಿಣಗಿ, ವಿಜಯ್ ಗೋಯಲ್, ಅನಂತಕುಮಾರ್ ಹೆಗಡೆ, ಅಶ್ವಿನಿ ಕುಮಾರ್ ಚೌಬೆ,  ಟಿಪಿ ಚೌದರಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.

ಅಲ್ಲದೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಬಸವರಾಜ ಹೊರಟ್ಟಿ, ವೀರಪ್ಪ ಮೊಯ್ಲಿ, ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಹೆಚ್.ಡಿ. ರೇವಣ್ಣ, ಆರ್.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ್, ಯು.ಟಿ. ಖಾದರ್, ಸಾರಾ ಮಹೇಶ್, ಸಿ.ಎಸ್. ಪುಟ್ಟರಾಜು, ವೆಂಕಟರಮಣಪ್ಪ, ಜಿ.ಟಿ. ದೇವೇಗೌಡ, ಶ್ರೀನಿವಾಸ ಪೂಜಾರಿ, ಅಮಿತ್ ಶಾ ಮೊದಲಾದವರು ಭಾಗವಹಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...