alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಸಕ ನಾಗೇಂದ್ರಗೆ ಸಚಿವ ಸ್ಥಾನ ನೀಡಿದ್ರೆ ಮೀಸೆ ಬೋಳಿಸುವುದಾಗಿ ಸವಾಲು ಹಾಕಿದ ಆನಂದ್ ಸಿಂಗ್

ಬಳ್ಳಾರಿ: ರಾಜ್ಯ ಕಾಂಗ್ರೆಸ್ ನಲ್ಲಿ ಬಂಡಾಯದ ಬೇಗುದಿ ಭುಗಿಲೆದ್ದಿದ್ದು, ಶಾಸಕ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಪ್ರಸ್ತಾಪದ ಬೆನ್ನಲ್ಲೇ ತೀವ್ರ ಅಸಮಾಧಾನಗೊಂದಿರುವ ಬಳ್ಳಾರಿ ಶಾಸಕರು ತಮಗೂ ಸಚಿವ ಸ್ಥಾನ ನೀಡಬೇಕೆಂಬ ಹಠಕ್ಕೆ ಬಿದ್ದಿದ್ದಾರೆ.

ಈ ನಡುವೆ ತಮ್ಮನ್ನು ಕಡೆಗಣಿಸಿ ಒಂದು ವೇಳೆ ಬಳ್ಳಾರಿ ಶಾಸಕ ನಾಗೇಂದ್ರ ಅವರಿಗೆ ಸಚಿವ ಸ್ಥಾನವನ್ನು ನೀಡಿದರೆ, ತಮ್ಮ ಮೀಸೆ ಬೋಳಿಸುವುದಾಗಿ ಹೊಸಪೇಟೆ ಶಾಸಕ ಆನಂದ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷ ಸೇರ್ಪಡೆಗೂ ಮೊದಲು ನನಗೆಸಚಿವ ಸ್ಥಾನ ನೀಡುವುದಾಗಿ ಪಕ್ಷ ಭರವಸೆ ನೀಡಿತ್ತು. ಈಗ ಏಕಾಏಕಿ ಜಾರಕಿಹೊಳಿ ಸಹೋದರರು ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಲು ಕಸರತ್ತು ನಡೆಸಿದ್ದಾರೆ. ಹೀಗಾಗಿ ನಮ್ಮನ್ನೆಲ್ಲ ಕಡೆಗಣಿಸಿ ಕಾಂಗ್ರೆಸ್, ನಾಗೇಂದ್ರ ಅವರಿಗೆ ಸ್ಥಾನ ನೀಡಿದ್ದೇ ಆದರೆ ನನ್ನ ಮೀಸೆ ಬೋಳಿಸುವುದಾಗಿ ಆನಂದ್ ಸಿಂಗ್ ತಮ್ಮ ಆಪ್ತರ ಬಳಿ ಸವಾಲು ಹಾಕಿದ್ದಾರೆ.

ಅಲ್ಲದೇ ನಾಗೇಂದ್ರ ಅವರಿಗೆ ಹೈಕಮಾಂಡ್ ಮಣೆ ಹಾಕಲು ಮುಂದಾದರೆ ನಾವೂ ಕೂಡ ಕಾಂಗ್ರೆಸ್ ನಲ್ಲಿ ನಮ್ಮ ಶಕ್ತಿ ಏನೆಂಬುದನ್ನು ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಕೈ ಪಾಳಯದಲ್ಲಿ ಅಸಮಾಧಾನದ ಹೊಗೆ ಜೋರಾಗಿ ಉರಿಯಲು ಆರಂಭವಾಗಿದ್ದು, ಹೈಕಮಾಂಡ್ ಯಾವ ತಂತ್ರ ಅನುಸರಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...