alex Certify
ಕನ್ನಡ ದುನಿಯಾ       Mobile App
       

Kannada Duniya

ಮೈಸೂರು ಅರಮನೆಯಲ್ಲಿ ಮದುವೆ ಸಂಭ್ರಮ

download (1)ವಿಶ್ವ ವಿಖ್ಯಾತ ಮೈಸೂರು ಅರಮನೆಯಲ್ಲಿ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಮದುವೆಗೆ ಭರದ ಸಿಧ್ಧತೆ ನಡೆದಿದೆ.

ಜೂನ್ 24 ರ ಸಂಜೆಯಿಂದಲೇ ಮದುವೆಯ ಶಾಸ್ತ್ರಗಳು ಪ್ರಾರಂಭಗೊಂಡು 25 ರ ಬೆಳಿಗ್ಗೆ ಪೂಜಾ ವಿಧಿ- ವಿಧಾನಗಳು ನೆರವೇರಲಿದ್ದು, ಜೂನ್ 26 ರಂದು ವರಪೂಜೆ ನಡೆಯಲಿದೆ. 27 ರ ಸೋಮವಾರ ಬೆಳಿಗ್ಗೆ ವಿವಾಹ ಮಹೋತ್ಸವ ನೆರವೇರುತ್ತದೆ. 28 ರಂದು ಆರತಕ್ಷತೆ, 29 ರಂದು ಮದುವೆ ಮೆರವಣಿಗೆ ನಡೆಯಲಿದೆ.

27 ಮತ್ತು 28 ರಂದು ಗಣ್ಯ ವ್ಯಕ್ತಿಗಳಿಗೆ ಆಹ್ವಾನ ನೀಡಲಾಗಿದೆ. ಮದುವೆ ಸಮಾರಂಭದ ಹಿನ್ನಲೆಯಲ್ಲಿ ಜೂನ್ 24 ರಿಂದ ಆರು ದಿನಗಳ ಕಾಲ ಸಾರ್ವಜನಿಕ ವೀಕ್ಷಣೆಗೆ ಅರಮನೆ ಸಂಪೂರ್ಣ ಬಂದ್ ಆಗಲಿದೆ. ಪಾಸ್ ಅಥವಾ ಆಹ್ವಾನ ಪತ್ರಿಕೆ ಇದ್ದವರಿಗೆ ಮಾತ್ರ ಅರಮನೆ ಪ್ರವೇಶ ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ. ಗಣ್ಯ ವ್ಯಕ್ತಿಗಳ ವಸತಿ ವ್ಯವಸ್ಥೆಗಾಗಿ ಪ್ರತಿಷ್ಟಿತ ರ್ಯಾಡಿಸನ್ ಬ್ಲೂ ಹೋಟೆಲ್ ನ ಎಲ್ಲ ರೂಮ್ ಗಳನ್ನು ಬುಕ್ ಮಾಡಲಾಗಿದೆ.

 

 

 

 

 

 

 

 

 

 

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...