alex Certify
ಕನ್ನಡ ದುನಿಯಾ       Mobile App
       

Kannada Duniya

ಅರಮನೆಯಲ್ಲಿ ಚಿತ್ರೀಕರಣ: ವಿಚಾರಣೆಗೆ ಹಾಜರಾದ ಆದಿತ್ಯ

Mysore-Palaceಮೈಸೂರಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯಲ್ಲಿ ಚಿತ್ರೀಕರಣ ನಡೆಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೂಲಕ ವಿವಾದಕ್ಕೆ ಕಾರಣವಾಗಿತ್ತು. ನಿಷೇಧವಿರುವ ಸ್ಥಳದಲ್ಲಿ ಚಿತ್ರೀಕರಣ ಮಾಡಿರುವ ಕುರಿತು ಪೊಲೀಸ್ ತನಿಖೆಯೂ ನಡೆದಿತ್ತು.

ಅರಮನೆಯ ನಿಷೇಧಿತ ಪ್ರದೇಶದಲ್ಲಿ ಚಿತ್ರೀಕರಣ ನಡೆಸಿದ ಆರೋಪದ ಮೇರೆಗೆ ನಿವೃತ್ತ ಐ.ಎ.ಎಸ್. ಅಧಿಕಾರಿ ನಂದಕುಮಾರ್ ಅವರ ಪುತ್ರ ಬಿ.ಎನ್. ಆದಿತ್ಯ ಹಾಗೂ ಸೊಸೆ ನವ್ಯತಾ ಅವರಿಗೆ ಮೈಸೂರು ಪೊಲೀಸರು ನೋಟಿಸ್ ಕೊಟ್ಟಿದ್ದರು. ಆ ಹಿನ್ನಲೆಯಲ್ಲಿ ಗುರುವಾರದಂದು ಆದಿತ್ಯ ವಿಚಾರಣೆಗೆ ಹಾಜರಾಗಿದ್ದರೆಂದು ಹೇಳಲಾಗಿದೆ.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ.ಹೆಚ್.ಟಿ. ಶೇಖರ್ ಅವರ ಕಚೇರಿಗೆ ಸಂಜೆ 4 ಗಂಟೆ ಸುಮಾರಿಗೆ ಆಗಮಿಸಿದ್ದ ಆದಿತ್ಯ, ರಾತ್ರಿ 8 ಗಂಟೆಯ ವರೆಗೂ ವಿಚಾರಣೆಗೊಳಪಟ್ಟಿದ್ದರೆನ್ನಲಾಗಿದ್ದು, ಚಿತ್ರೀಕರಣಕ್ಕೆ ಅನುಮತಿ ಪಡೆದ ಕುರಿತು ಹಲವು ಮಾಹಿತಿಗಳನ್ನು ಪೊಲೀಸರಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...