alex Certify
ಕನ್ನಡ ದುನಿಯಾ       Mobile App
       

Kannada Duniya

ಸಿದ್ದರಾಮಯ್ಯ ವಿರುದ್ದ ರೆಬೆಲ್ ಸ್ಟಾರ್ ಗುಡುಗು

Congress-Ambareesh 345ಸಚಿವ ಸ್ಥಾನ ಕಳೆದುಕೊಂಡಿರುವ ರೆಬೆಲ್ ಸ್ಟಾರ್ ಅಂಬರೀಷ್, ಜೆ.ಪಿ. ನಗರದ ತಮ್ಮ ನಿವಾಸದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯನವರಿಗೆ ಸ್ವಲ್ಪ ಡಿಗ್ನಿಟಿ ಇರಬೇಕಿತ್ತು ಎಂದ ಅಂಬರೀಷ್, ನನಗೆ ಕೇಳಿದ್ದರೆ ನಾನೇ ರಾಜೀನಾಮೆ ಕೊಟ್ಟು ಬರುತ್ತಿದೆ ಎಂದಿದ್ದಾರೆ.

ಸಿದ್ದರಾಮಯ್ಯ ಏನು ಹಿಟ್ಲರಾ ಎಂದು ಪ್ರಶ್ನಿಸಿದ ಅಂಬರೀಶ್, ತಾವೇನು ಮಂತ್ರಿ ಮಾಡಿ ಎಂದು ಅಪ್ಲಿಕೇಶನ್ ಹಾಕಿರಲಿಲ್ಲ. ಅಸಮರ್ಥನೆಂಬ ಕಾರಣಕ್ಕೆ ತಮ್ಮನ್ನು ಮಂತ್ರಿ ಮಂಡಲದಿಂದ ಕೈ ಬಿಟ್ಟಿದ್ದಾರೆಂದರೆ ಶಾಸಕನಾಗಿ ಏನು ಪ್ರಯೋಜನವೆಂದು ಅಂಬರೀಷ್ ಮಾರ್ಮಿವಾಗಿ ಹೇಳಿದರು.

ಮಂತ್ರಿಯಾದ ಮೂರು ವರ್ಷಗಳಲ್ಲಿ ಕೇವಲ ಐದಾರು ಬಾರಿ ಮುಖ್ಯಮಂತ್ರಿಯವರ ನಿವಾಸಕ್ಕೆ ಭೇಟಿ ನೀಡಿರುವುದಾಗಿ ಹೇಳಿದ ಅವರು, ಶ್ರೀನಿವಾಸ್ ಪ್ರಸಾದ್ ರಂತ ಹಿರಿಯ ನಾಯಕರೂ ಸೇರಿದಂತೆ ಸಂಪುಟದಿಂದ ಕೈ ಬಿಟ್ಟ ಮಂತ್ರಿಗಳನ್ನು ಗೌರವಯುತವಾಗಿ ಕಳಿಸಿಕೊಡಬೇಕಿತ್ತು. ಆದರೆ ಸೌಜನ್ಯಕ್ಕೂ ಸಿದ್ದರಾಮಯ್ಯನವರು ಯಾರೊಂದಿಗೂ ಸಮಾಲೋಚಿಸದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿರುವುದು ನೋವು ತಂದಿದೆ. ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲವೆಂದರು.

ಅಂಬರೀಷ್, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರದಲ್ಲಿ ಅಚಲರಾಗಿದ್ದು, ಯಾರ ಮನವೊಲಿಕೆಗೂ ಜಗ್ಗುವುದಿಲ್ಲವೆಂಬ ಮಾತುಗಳು ಕೇಳಿ ಬರುತ್ತಿರುವ ಮಧ್ಯೆ ಅವರ ಇಂದಿನ ಪತ್ರಿಕಾಗೋಷ್ಟಿ ಮಹತ್ವ ಪಡೆದಿದೆ. ಅಲ್ಲದೇ ಸ್ವತಃ ತಾವೇ ಹೋಗಿ ರಾಜೀನಾಮೆ ಸಲ್ಲಿಸುವುದಾಗಿ ಅವರು ತಿಳಿಸಿದ್ದು, ಮುಂದಿನ ರಾಜಕೀಯ ನಡೆ ಕುತೂಹಲ ಕೆರಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...