alex Certify
ಕನ್ನಡ ದುನಿಯಾ       Mobile App
       

Kannada Duniya

ಕುತೂಹಲಕ್ಕೆ ಕಾರಣವಾಗಿವೆ ವಿಚಿತ್ರ ಹೆಜ್ಜೆ ಗುರುತುಗಳು

alien

ಗದಗ ಜಿಲ್ಲೆಯ ಅಂಟೂರು ಎಂಬಲ್ಲಿ ವಿಚಿತ್ರ ಹೆಜ್ಜೆಗುರುತುಗಳು ಪತ್ತೆಯಾಗಿವೆ. ಬಹುಷಃ ಏಲಿಯನ್ ಗಳು ಈ ಭಾಗದಲ್ಲಿ ನಡೆದಾಡುತ್ತಿವೆ ಅನ್ನೋ ಅನುಮಾನ ಮೂಡಿದ್ದು, ಗ್ರಾಮಸ್ಥರು ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ. ಭಾನುವಾರ ಬೆಳಗಿನ ಜಾವ 2 ಗಂಟೆಗೆ ಭಾರವಾಗಿ ಉಸಿರಾಡುವ ಸದ್ದು ಕೇಳಿಸಿದೆ ಅಂತಾ ಗ್ರಾಮಸ್ಥರು ತಿಳಿಸಿದ್ದಾರೆ.

footprint

ಬೃಹತ್ ಗಾತ್ರದ 20-30 ಹೆಜ್ಜೆಗುರುತುಗಳು ಭೀತಿ ಹುಟ್ಟಿಸಿವೆ. ಈ ರೀತಿಯ ಹೆಜ್ಜೆಗುರುತನ್ನು ಇದುವರೆಗೂ ಕಂಡಿರಲಿಲ್ಲ ಅಂತಾ ಗ್ರಾಮಸ್ಥರು ಹೇಳ್ತಿದ್ದಾರೆ. ಈ ಗ್ರಾಮಕ್ಕೆ ಏಲಿಯನ್ ಗಳು ಬಂದಿದ್ದವು ಅನ್ನೋ ಸುದ್ದಿ ಸುತ್ತಮುತ್ತಲ ಹಳ್ಳಿಗಳಿಗೆಲ್ಲಾ ವ್ಯಾಪಿಸಿದೆ. ಜನರು ಕುತೂಹಲದಿಂದ ಅದನ್ನು ವೀಕ್ಷಿಸಲು ಬರುತ್ತಿದ್ದು, ಬಹಳಷ್ಟು ಹೆಜ್ಜೆ ಗುರುತುಗಳು ಅಳಿಸಿ ಹೋಗಿವೆ.

ಬೂದಿಹಾಳ ಮಠದ ಬಳಿ ಇರುವ ಹೊಲದಲ್ಲಿ ಹೆಜ್ಜೆ ಗುರುತುಗಳು ಮೂಡಿವೆ.ಆ ಗುರುತು ಯಾವುದೇ ಪ್ರಾಣಿಯ ಹೆಜ್ಜೆಯನ್ನೂ ಹೋಲುತ್ತಿಲ್ಲ. ಏಲಿಯನ್ ಬಂದಿತ್ತು ಅನ್ನೋ ಸುದ್ದಿ ಕೇಳಿದ್ದೇ ತಡ ಮಹಿಳೆಯರು, ಮಕ್ಕಳಂತೂ ಮನೆಯಿಂದ ಹೊರಬರುತ್ತಿಲ್ಲ. ರಾತ್ರಿ ನಿದ್ದೆ ಮಾಡಲು ಕೂಡ ಭಯಪಡುತ್ತಿದ್ದಾರೆ. ಹಾಗಾಗಿ ಗ್ರಾಮದಲ್ಲಿ ಪೆಟ್ರೋಲಿಂಗ್ ನಡೆಸಲು ಅರಣ್ಯ ಇಲಾಖೆ ನಿರ್ಧರಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...