alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಗ್ ಕಳೆದುಕೊಂಡಿದ್ದ ಮಹಿಳೆಗೆ ಸಿಕ್ತು ಪರಿಹಾರ

2015 ರಲ್ಲಿ ಏರ್ ಏಷ್ಯಾ ವಿಮಾನದಲ್ಲಿ ಮೈಸೂರು ಮೂಲದ ಪ್ರೊಫೆಸರ್ ಒಬ್ಬರ ಬ್ಯಾಗ್ ಕಳೆದುಹೋಗಿತ್ತು. ಡಿಸೈನರ್ ಉಡುಪುಗಳು ಹಾಗೂ ಕಾಸ್ಮೆಟಿಕ್ಸ್ ಇದ್ದ ಬ್ಯಾಗ್ ಕಳೆದು ಹೋಗಿರುವ ಬಗ್ಗೆ ಆಕೆ ದೂರು ನೀಡಿದ್ದರು.

14 ತಿಂಗಳುಗಳ ಕಾನೂನು ಹೋರಾಟದ ಬಳಿಕ ಮೈಸೂರಿನ ನಿವೇದಿತಾ ಲೋಕೇಶ್ ಗೆ ನ್ಯಾಯ ಸಿಕ್ಕಿದೆ. ಜಿಲ್ಲಾ ಗ್ರಾಹಕ ವಿವಾದ ಪರಿಹಾರ ವೇದಿಕೆ ನಿವೇದಿತಾಗೆ 75,000 ರೂಪಾಯಿ ಪರಿಹಾರ ನೀಡುವಂತೆ ಏರ್ ಏಷ್ಯಾಗೆ ಸೂಚಿಸಿದೆ.

2015 ರ ಅಕ್ಟೋಬರ್ 20ರಂದು ನಿವೇದಿತಾ ಬೆಂಗಳೂರಿನಿಂದ ಜೈಪುರಕ್ಕೆ ಏರ್ ಏಷ್ಯಾ ವಿಮಾನದಲ್ಲಿ ಪ್ರಯಾಣಿಸಿದ್ದರು. ಜೈಪುರ ತಲುಪುವಷ್ಟರಲ್ಲಿ ಅವರ ಒಂದು ಬ್ಯಾಗ್ ಕಾಣೆಯಾಗಿತ್ತು. ಅದರಲ್ಲಿ ಸುಮಾರು 35,000 ರೂಪಾಯಿ ಮೌಲ್ಯದ ಉಡುಪು ಹಾಗೂ ಕಾಸ್ಮೆಟಿಕ್ಸ್ ಇತ್ತು ಅಂತಾ ನಿವೇದಿತಾ ತಿಳಿಸಿದ್ರು. ‘

ಬ್ಯಾಗ್ ಪತ್ತೆ ಮಾಡಿಕೊಡುವುದಾಗಿ ಏರ್ ಏಷ್ಯಾ ಸಿಬ್ಬಂದಿ ಭರವಸೆ ನೀಡಿದ್ದರು. ಕೆಲದಿನಗಳ ಬಳಿಕ ಬ್ಯಾಗ್ ಕಳವಾಗಿರೋದಾಗಿ ಏರ್ ಏಷ್ಯಾ ಮಾಹಿತಿ ನೀಡಿತ್ತು. 7 ಕೆಜಿ ಬ್ಯಾಗ್ ಗೆ 1400 ರೂಪಾಯಿ ಪರಿಹಾರ ಕೊಡೋದಾಗಿ ತಿಳಿಸಿತ್ತು. ನಂತರ ಆ ಮೊತ್ತವನ್ನು 8000 ರೂಪಾಯಿಗೆ ಏರಿಸಿತ್ತು. ಇದಕ್ಕೆ ಒಪ್ಪದ ನಿವೇದಿತಾ ದೂರು ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...