alex Certify
ಕನ್ನಡ ದುನಿಯಾ       Mobile App
       

Kannada Duniya

ಓಡಿ ಬಂದ ಬಾಲಕನಿಗಾಗಿ ಬಸ್ ನಿಲ್ಲಿಸಿದ ರಾಹುಲ್ ಗಾಂಧಿ

ರಾಜ್ಯದಲ್ಲಿ ನಿನ್ನೆಯಿಂದ ಜನಾಶೀರ್ವಾದ ಯಾತ್ರೆ ಕೈಗೊಂಡಿರುವ ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ಕುಕನೂರು ಅತಿಥಿ ಗೃಹದಲ್ಲಿ ತಂಗಿದ್ದು, ಅಲ್ಲಿಂದಲೇ 2 ನೇ ದಿನದ ಯಾತ್ರೆ ಆರಂಭಿಸಿದ್ದಾರೆ.

ಕುಕನೂರು ಅತಿಥಿಗೃಹದಲ್ಲಿ ಬೆಳಿಗ್ಗೆ ಇಡ್ಲಿ, ಉಪ್ಪಿಟ್ಟು ಸೇವಿಸಿ ಅಲ್ಲಿಂದ ಪ್ರವಾಸ ಶುರು ಮಾಡಿದ್ದಾರೆ. ಸಿ.ಎಂ. ಸಿದ್ಧರಾಮಯ್ಯ, ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮೊದಲಾದವರು ಅವರಿಗೆ ಸಾಥ್ ನೀಡಿದ್ದಾರೆ.

ಕುಕನೂರು ಗೆಸ್ಟ್ ಹೌಸ್ ಬಳಿ ಅಪಾರ ಸಂಖ್ಯೆಯ ಜನ ಸೇರಿದ್ದು, ಜನರನ್ನು ಕಂಡು ಸಂತಸಗೊಂಡ ರಾಹುಲ್ ಕೈ ಬೀಸಿದ್ದಾರೆ. ರಾಹುಲ್ ರೋಡ್ ಶೋ ಆರಂಭಿಸುತ್ತಿದ್ದಂತೆ ಬಾಲಕನೊಬ್ಬ ಜನಾಶೀರ್ವಾದ ಯಾತ್ರೆ ಬಸ್ ಹಿಂದೆ ಓಡಿ ಬಂದಿದ್ದಾನೆ.

ಇದನ್ನು ಬಸ್ ನಲ್ಲಿದ್ದ ರಾಹುಲ್ ಗಾಂಧಿ ಗಮನಿಸಿದ್ದಾರೆ. ಬಸ್ ನಿಲ್ಲಿಸಿ ಬಾಲಕನನ್ನು ಕರೆಸಿಕೊಂಡು ಕ್ಯಾಮೆರಾಗಳಿಗೆ ಪೋಸ್ ಕೊಟ್ಟಿದ್ದಾರೆ. ಬಾಲಕನನ್ನು ಹತ್ತಿರಕ್ಕೆ ಕರೆದು ಮಾತನಾಡಿದ ರಾಹುಲ್ ಅಲ್ಲಿಂದ ಪ್ರಯಾಣ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...