alex Certify
ಕನ್ನಡ ದುನಿಯಾ       Mobile App
       

Kannada Duniya

ಅವ್ಯವಹಾರಗಳ ಕೇಂದ್ರವಾದ ಪರಪ್ಪನ ಅಗ್ರಹಾರ: ಶಶಿಕಲಾಗೆ ವಿಐಪಿ ಸೌಲಭ್ಯ

sasikala

ಪರಪ್ಪನ ಅಗ್ರಹಾರದ ಬಣ್ಣ ಬಯಲಾಗಿದೆ. ಪರಪ್ಪನ ಅಗ್ರಹಾರದಲ್ಲಿ ಅಕ್ರಮ ನಡೆಯುತ್ತಿದೆ ಎಂಬ ವಿಷಯವನ್ನು ಜೈಲು ಉಪ ನಿರೀಕ್ಷಕಿ ಡಿ.ರೂಪಾ ಬಯಲು ಮಾಡಿದ್ದಾರೆ. ಡಿ. ರೂಪಾ ಹಿರಿಯ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಜೈಲಿನ ಎಲ್ಲ ಅವ್ಯವಹಾರಗಳ ಬಗ್ಗೆ ವಿವರವಾಗಿ ಬರೆದಿದ್ದಾರೆ.

ನ್ಯೂಸ್ 18 ನೀಡಿರುವ ವರದಿ ಪ್ರಕಾರ ಎಐಎಡಿಎಂಕೆ ನಾಯಕಿ ಶಶಿಕಲಾಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ವ್ಯವಸ್ಥೆ ಮಾಡಲಾಗಿದೆಯಂತೆ. ಶಶಿಕಲಾಗಾಗಿಯೇ ಪ್ರತ್ಯೇಕ ಕಿಚನ್ ನೀಡಲಾಗಿದೆಯಂತೆ. ಡಿಐಜಿ ರೂಪಾ, ಡಿಜಿಪಿ ಹೆಚ್ ಎಸ್ ಎನ್ ರಾವ್ ಅವರಿಗೆ ನೀಡಿರುವ ಪತ್ರದಲ್ಲಿ ಈ ವಿಷಯ ತಿಳಿಸಿದ್ದಾರೆ.

ಶಶಿಕಲಾ ಕಾರಾಗೃಹದ ಮಹಾ ನಿರ್ದೇಶಕ ಸತ್ಯನಾರಾಯಣ್ ಗೆ ಲಂಚದ ರೂಪದಲ್ಲಿ 2 ಕೋಟಿ ನೀಡಿದ್ದಾರೆಂದು ರೂಪಾ ಹೇಳಿದ್ದಾರೆ. ಇದ್ರ ಜೊತೆಗೆ ಬೇರೆ ಕೆಲ ಆರೋಪಿಗಳಿಗೂ ಐಷಾರಾಮಿ ವ್ಯವಸ್ಥೆ ಮಾಡಲಾಗಿದೆ ಎಂದು ರೂಪಾ ಹೇಳಿದ್ದಾರೆ. ಸ್ಟಾಂಪ್ ಪೇಪರ್ ಹಗರಣ ಆರೋಪಿ ಅಬ್ದುಲ್ ಕರೀಂ ಲಾಲ್ ತೆಲಗಿಗೂ ಐಷಾರಾಮಿ ಜೀವನ ನೀಡಲಾಗಿದೆ ಎಂದು ರೂಪಾ ಪತ್ರದಲ್ಲಿ ಹೇಳಿದ್ದಾರೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ರೂಪಾ ಪತ್ರದ ಕೊನೆಯಲ್ಲಿ ಒತ್ತಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...