alex Certify
ಕನ್ನಡ ದುನಿಯಾ       Mobile App
       

Kannada Duniya

ಯಮರಾಜನ ಬಳಿಕ ರೋಡಿಗೆ ಬಂದ ಗಣೇಶ

ಬೆಂಗಳೂರು ಸಂಚಾರಿ ಪೊಲೀಸರು ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ಮತ್ತು ಸಂಚಾರಿ ನಿಯಮಗಳನ್ನ ಉಲ್ಲಂಘನೆ ಮಾಡದಂತೆ ತಡೆಯೋಕೆ ಯಮರಾಜನ ವೇಷಧಾರಿಯೊಬ್ಬನನ್ನು ರಸ್ತೆಗಿಳಿಸಿದ್ದರು. ಆ ಮೂಲಕ ನಿಯಮ ಉಲ್ಲಂಘಿಸಿದ್ರೆ ಸಾವು ಬರಲಿದೆ ಅನ್ನೋ ಸಂದೇಶವನ್ನ ಪೊಲೀಸರು, ವಾಹನ ಸವಾರರಿಗೆ ತಲುಪಿಸಿದ್ರು. ರಸ್ತೆ ಸುರಕ್ಷತಾ ಸಪ್ತಾಹದ ಮುಂದುವರೆದ ಭಾಗವಾಗಿ ಪೊಲೀಸರು ಈಗ ಗಣೇಶನನ್ನ ಕರೆ ತಂದಿದ್ದಾರೆ.

ಗಣೇಶನ ವೇಷಧಾರಿಯಾಗಿ ಬೆಂಗಳೂರಿನ ರಸ್ತೆಗಳಲ್ಲಿ ಕಾಣಿಸಿಕೊಳ್ತಿರೋ ವ್ಯಕ್ತಿ ಹೆಲ್ಮೆಟ್ ಧರಿಸದ ವಾಹನ ಸವಾರರಿಗೆ ಗುಲಾಬಿ ಹೂವನ್ನು ಕೊಟ್ಟು ಸಂಚಾರಿ ನಿಯಮ ಪಾಲಿಸುವಂತೆ ಸವಿನಯವಾದ ಎಚ್ಚರಿಕೆ ನೀಡ್ತಿದ್ದಾರೆ. ವಾಹನ ಸವಾರರಿಗೆ ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಮತ್ತು ಹೆಲ್ಮೆಟ್ ಧರಿಸುವಂತೆ ತಿಳುವಳಿಕೆ ಹೇಳ್ತಿದ್ದಾರೆ. ಈ ಘಟನಾವಳಿಯ ಹಲವು ಫೊಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ವಾಹನ ಸವಾರರಿಗೆ ರಸ್ತೆ ನಿಯಮಗಳನ್ನ ಉಲ್ಲಂಘಿಸದಂತೆ ಅರಿವು ಮೂಡಿಸೋದಕ್ಕೆ ಪೊಲೀಸ್ ಇಲಾಖೆ ವಿಭಿನ್ನ ಕಾರ್ಯಯೋಜನೆಗಳನ್ನ ರೂಪಿಸುತ್ತಿದೆ. ಬೀದಿ ನಾಟಕಗಳ ಮೂಲಕ ಯಮ ಧರ್ಮರಾಜ ವೇಷಧಾರಿಯನ್ನ ರಸ್ತೆಗಿಳಿಸುವ ಮೂಲಕ, ಸಾಮಾಜಿಕ ಜಾಲತಾಣಗಳಲ್ಲಿ ಮೆಮ್ಸ್ಗಳ ಮೂಲಕ ಜನರಲ್ಲಿ ಬದಲಾವಣೆಯನ್ನ ತರೋದಕ್ಕೆ ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ಬೆಂಗಳೂರು ಪೊಲೀಸರ ಕಾರ್ಯಕ್ಕೆ ಮುಂಬೈ ಪೊಲೀಸರು ಕೂಡ ಸಾಮಾಜಿಕ ಜಾಲತಾಣದಲ್ಲಿ ಕೈ ಜೋಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...