alex Certify
ಕನ್ನಡ ದುನಿಯಾ       Mobile App
       

Kannada Duniya

ರಾಹುಲ್ ಗಾಂಧಿ ಇನ್ನು ಹರಿದ ಕುರ್ತಾ ಹಾಕಬೇಕಿಲ್ಲ..!

rahul

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಹರಿದ ಕುರ್ತಾ ಈಗ ರಾಷ್ಟ್ರ ರಾಜಕಾರಣದಲ್ಲಿ ಬಿಸಿ ಬಿಸಿ ಚರ್ಚೆಯಾಗ್ತಿದೆ. ರಾಹುಲ್, ಕುರ್ತಾ ರಾಜಕೀಯ ಶುರು ಮಾಡಿದ್ದಾರೆ, ನಾವೇನ್ ಕಮ್ಮಿ ಅಂತಾ ಕರ್ನಾಟಕದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಯುವರಾಜನಿಗೆ ಹೊಸ ಕುರ್ತಾ ಒಂದನ್ನು ಕಳಿಸಿಕೊಟ್ಟಿದ್ದಾರೆ.

ಮೂರು ದಿನಗಳ ಹಿಂದೆ ಉತ್ತರಾಖಂಡ್ ನಲ್ಲಿ ಪಕ್ಷದ ಕಾರ್ಯಕರ್ತರ ಜೊತೆ ಸಭೆಯಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ ತಮ್ಮ ಜೇಬಿನಲ್ಲಿ ಕೈಹಾಕಿ ಹರಿದ ಕುರ್ತಾವನ್ನು ಪ್ರದರ್ಶಿಸಿದ್ರು. ‘ತಮಗೆ ಕುರ್ತಾ ಹರಿದ್ರೂ ಪರವಾಗಿಲ್ಲ, ಅದರಿಂದೇನೂ ವ್ಯತ್ಯಾಸವಾಗುವುದಿಲ್ಲ. ಆದ್ರೆ ಬಡವರ ಪರ ರಾಜಕಾರಣ ಮಾಡುತ್ತೇನೆಂದು ಹೇಳುವ ಮೋದಿ ಅವರ ಕುರ್ತಾ ಒಮ್ಮೆಯೂ ಹರಿದಿರಲಿಕ್ಕಿಲ್ಲ’ ಅಂತಾ ವ್ಯಂಗ್ಯವಾಡಿದ್ದರು.

ರಾಹುಲ್ ಗಾಂಧಿ ಬಳಿ ಹೊಸ ಕುರ್ತಾ ಕೊಳ್ಳಲು ಹಣವಿಲ್ವೇ? ಹಾಗಿದ್ರೆ ವಿದೇಶ ಪ್ರವಾಸ ಮಾಡಿದ್ದು ಹೇಗೆ ಅನ್ನೋ ಪ್ರಶ್ನೆಗಳೆಲ್ಲಾ ಸಾಮಾಜಿಕ ತಾಣಗಳಲ್ಲಿ ಹರಿದಾಡಿತ್ತು. ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನ ಬೇಡ ಅಂತಾ ಎಲ್ಲರೂ ಟೀಕಿಸಿದ್ದರು. ಇದರ ಬೆನ್ನಲ್ಲೇ ಹಾವೇರಿಯ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರಾಹುಲ್ ಗಾಂಧಿಗೆ ಹೊಸ ಕುರ್ತಾ ಕಳಿಸಿಕೊಟ್ಟಿದ್ದಾರೆ.

‘40 ದಿನಗಳ ಹಿಂದೆ ಬ್ಯಾಂಕ್ ಗೆ ಬಂದಿದ್ದ ರಾಹುಲ್ 4000 ರೂಪಾಯಿ ವಿತ್ ಡ್ರಾ ಮಾಡಿದ್ದರು, ಅದಾದ ಮೇಲೆ ಮತ್ತೆ ಬ್ಯಾಂಕ್ ಕಡೆ ಸುಳಿದಿಲ್ಲ. ಹಾಗಾಗಿ ಬಹುಷಃ ರಾಹುಲ್ ಬಳಿ ಹೊಸ ಕುರ್ತಾ ಕೊಳ್ಳಲು ಹಣವಿಲ್ಲದೇ ಇರಬಹುದು, ಹಾಗಾಗಿ ನಾವೇ ಕಳಿಸಿಕೊಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಅವರ ಇಂತಹ ವರ್ತನೆಗೆ ಜನರೇ ಪಾಠ ಕಲಿಸ್ತಾರೆ’ ಅಂತಾ ಬಿಜೆಪಿ ಕಾರ್ಯಕರ್ತರು ಕಿಡಿಕಾರಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...