alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಬಿಎಂಪಿ ಜಾಣ ಕಿವುಡಿಗೆ ಬೇಸತ್ತು ರಸ್ತೆ ಗುಂಡಿಗಳನ್ನು ಮುಚ್ಚಿದ ಟ್ರಾಫಿಕ್ ಪೊಲೀಸರು

ಬಿಬಿಎಂಪಿ ಅಧಿಕಾರಿಗಳ ಜಾಣ ಕಿವುಡುತನಕ್ಕೆ ಬೇಸತ್ತ ಟ್ರಾಫಿಕ್ ಪೊಲೀಸರು ತಾವೇ ರಸ್ತೆ ಗುಂಡಿಗಳು ಮತ್ತು ಮ್ಯಾನ್ ಹೋಲ್ಗಳನ್ನು ಮುಚ್ಚಿದ ಘಟನೆ ಕುಮಾರಸ್ವಾಮಿ ಲೇಔಟ್ ನಲ್ಲಿ ನಡೆದಿದೆ. ರಸ್ತೆ ಗುಂಡಿ ಮತ್ತು ತೆರೆದ ಮ್ಯಾನ್ ಹೋಲ್ ಮುಚ್ಚುವಂತೆ ಸ್ಥಳೀಯ ಬಿಬಿಎಂಪಿ ಕಚೇರಿಗೆ ಸಾಕಷ್ಟು ದೂರುಗಳು ಬಂದಿದ್ದವು. ಆದ್ರೆ ಬಿಬಿಎಂಪಿ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಪೊಲೀಸರು ಕೂಡ ಸ್ಥಳೀಯರು ರಸ್ತೆಯಲ್ಲಿ ಪಡುವ ಪಡಿಪಾಟಲುಗಳನ್ನ ನೋಡಿ ಬೇಸತ್ತುಬಿಟ್ಟಿದ್ದರು. ಈ ಬಗ್ಗೆ ಯಾವಾಗ ಸ್ಥಳೀಯ ಸಂಸ್ಥೆ ತಲೆಕೆಡಿಸಿಕೊಂಡೇ ಇಲ್ಲ ಅನ್ನೋದು ಟ್ರಾಫಿಕ್ ಪೊಲೀಸರ ಗಮನಕ್ಕೆ ಬಂತೋ ಆಗ್ಲೇ ಪೊಲೀಸರು ಕ್ರಮಕ್ಕೆ ಮುಂದಾದ್ರು. ಅಂಜನಾಪುರ ವಾರ್ಡ್ ನ ಡಬ್ಬಲ್ ರೋಡ್ ನಲ್ಲಿರುವ ರಸ್ತೆ ಗುಂಡಿಗಳು ಮತ್ತು ಮ್ಯಾನ್ ಹೋಲ್ ಗೆ ಪೊಲೀಸರೇ ಮಣ್ಣು ತುಂಬಿದ್ದಾರೆ.

ಮಳೆ ಹೆಚ್ಚಾದ ಹಿನ್ನಲೆಯಲ್ಲಿ ಗುಂಡಿ ಬಿದ್ದ ರಸ್ತೆಗಳು ಮತ್ತು ಬಾಯ್ತೆರೆದಿದ್ದ ಮ್ಯಾನ್ ಹೋಲ್ಗಳಿಂದ ವಾಹನ ಸವಾರರಿಗೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇತ್ತು. ಅದೇ ಕಾರಣಕ್ಕೆ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ರಸ್ತೆಗುಂಡಿಗಳನ್ನ ಮುಚ್ಚಿದ್ದಾರೆ. ಕುಮಾರಸ್ವಾಮಿ ಲೇಔಟ್ ನ ಎಎಸ್ಐ ಆದಂತಾ ಕೃಷ್ಣಯ್ಯ ಮತ್ತು ನಾಲ್ವರು ಟ್ರಾಫಿಕ್ ಪೊಲೀಸ್ ಪೇದೆಗಳು ರಸ್ತೆ ಗುಂಡಿ ಮುಚ್ಚಿದ್ದಾರೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಸಮಸ್ಯೆ ಆಲಿಸದ ಸ್ಥಳೀಯ ಕಾರ್ಪೊರೇಟರ್ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...