alex Certify
ಕನ್ನಡ ದುನಿಯಾ       Mobile App
       

Kannada Duniya

ಎಂಬಿಬಿಎಸ್ ಸೀಟ್ ಗೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ತಮ್ಮ ಸಂಸ್ಥೆಯಲ್ಲಿರುವ ಆಡಳಿತ ಮಂಡಳಿ ಸೀಟುಗಳನ್ನು ಸುನ್ನಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ಮಾತ್ರ ನೀಡುತ್ತೇವೆ. ಇದಕ್ಕೆ ಒಪ್ಪಿಗೆ ಸೂಚಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಮಂಗಳೂರಿನ ಕನಚುರ್‌ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿನ ಆಡಳಿತ ಮಂಡಳಿಯ ಎಂಬಿಬಿಎಸ್‌ ಸೀಟುಗಳನ್ನು ಕೇವಲ ಸುನ್ನಿ ವರ್ಗದ ಮುಸಲ್ಮಾನರಿಗೆ ಮಾತ್ರ ನೀಡಬೇಕು. ಈ ಸಂಬಂಧ ಸೂಕ್ತ ಆದೇಶ ನೀಡಬೇಕು ಎಂದು ಕನಚುರ್‌ ಇಸ್ಲಾಮಿಕ್‌ ಎಜುಕೇಶನ್‌ ಟ್ರಸ್ಟ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಸ್‌. ಬೋಪಣ್ಣ ಹಾಗೂ ನ್ಯಾ. ಮೊಹಮ್ಮದ್‌ ನವಾಜ್‌ ಅವರಿದ್ದ ವಿಭಾಗೀಯ ಪೀಠ, ಎಲ್ಲ ಧರ್ಮದ ಸಂಸ್ಥೆಗಳು ಇಂತಹುದೇ ನಿರ್ಧಾರ ಕೈಗೊಂಡಲ್ಲಿ, ಸಂಪೂರ್ಣ ವೈದ್ಯಕೀಯ ಪ್ರವೇಶಾತಿ ಪ್ರಕ್ರಿಯೆಗೆ ತೊಡಕಾಗುತ್ತದೆ. ಕಲಿಕೆಗಾಗಿ ಬರುವ ವಿದ್ಯಾರ್ಥಿಗಳನ್ನು ಧರ್ಮದ ಆಧಾರಕ್ಕಾಗಿ ಪ್ರವೇಶಾತಿ ನಿರಾಕರಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂಸ್ಥೆಯಲ್ಲಿ ಎಂಬಿಬಿಎಸ್‌ ಮ್ಯಾನೇಜ್‌ಮೆಂಟ್‌ ವಿಭಾಗದಲ್ಲಿ ಭರ್ತಿಯಾಗುವ ಸೀಟುಗಳನ್ನು ಕೇವಲ ಸುನ್ನಿ ಮುಸಲ್ಮಾನರಿಗೆ ಮಾತ್ರ ನೀಡುತ್ತೇವೆ ಎಂದು ಟ್ರಸ್ಟ್‌ ನಿರ್ಧಾರವನ್ನು ವೈದ್ಯಕೀಯ ಶಿಕ್ಷಣ ಇಲಾಖೆ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಟ್ರಸ್ಟ್‌ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಸುನ್ನಿ ಮುಸ್ಲಿಮರಿಂದ ಆಡಳಿತಕ್ಕೆ ಒಳಪಟ್ಟ ಸಂಸ್ಥೆ ಇದಾಗಿದ್ದು, ಸಂಪೂರ್ಣ ಅಲ್ಪಸಂಖ್ಯಾತರಿಗಾಗಿಯೇ ಇರುವ ಕಾಲೇಜು ಆಗಿದೆ. ಆಡಳಿತ ಮಂಡಳಿಗೆ ತಮ್ಮ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಎಲ್ಲ ಹಕ್ಕು ಇದೆ. ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು, ಸರಕಾರದಿಂದ ಹಾಗೂ ಮಂಗಳೂರು ಸುನ್ನಿ ಜಮ್ ಇಯ್ಯಾತುಲ್‌ ಉಲಮದಿಂದ ಜಾತಿ ಅನುಮೋದಿತ ಜಾತಿ ಪ್ರಮಾಣ ಪತ್ರ ಪಡೆದು ಬರಬೇಕು ಎಂದು ಮೇ ತಿಂಗಳಲ್ಲಿ ಟ್ರಸ್ಟ್‌ ತಿಳಿಸಿತ್ತು. ಇದನ್ನು ವೈದ್ಯಕೀಯ ಶಿಕ್ಷಣ ಇಲಾಖೆ ನಿರಾಕರಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...