alex Certify
ಕನ್ನಡ ದುನಿಯಾ       Mobile App
       

Kannada Duniya

ಕಿರು ತೆರೆ ನಟಿ ಮೇಘನಾ ಮೇಲೆ ಹಲ್ಲೆ

crimet-ff

ಬೆಂಗಳೂರು: ನಟಿಯೊಬ್ಬರ ಮನೆಗೆ ನುಗ್ಗಿದ ಯುವಕರ ಗುಂಪೊಂದು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕಿರುತೆರೆ ನಟಿ ಮೇಘನಾ ಹಲ್ಲೆಗೆ ಒಳಗಾದವರು. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೇಘನಾ ಅವರ ಮನೆಗೆ ನುಗ್ಗಿದ ದರ್ಶನ್, ಪೃಥ್ವಿ, ವಿನೂತನ್ ಹಾಗೂ ಮತ್ತೊಬ್ಬ ಪೀಠೋಪಕರಣಗಳನ್ನು ಧ್ವಂಸ ಮಾಡಿ, ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದವರು ನಟ ಹರೀಶ್ ಸಹೋದರ ಮತ್ತು ಆತನ ಸ್ನೇಹಿತರು ಎಂದು ಹೇಳಲಾಗಿದೆ.

ಮೇಘನಾ ಹಾಗೂ ನಟ ಹರೀಶ್ ಮದುವೆಯಾಗಲು ತೀರ್ಮಾನಿಸಿದ್ದು, ನಿಶ್ಚಿತಾರ್ಥ ಮಾಡಿಕೊಂಡಿದ್ದರೆನ್ನಲಾಗಿದೆ. ಆದರೆ, ಇತ್ತೀಚೆಗೆ ಹರೀಶ್ ಮೃತಪಟ್ಟಿದ್ದರು. ನಿಮ್ಮ ಮನೆಯಲ್ಲಿರುವ ಪೀಠೋಪಕರಣ ನಮ್ಮ ಅಣ್ಣ ಹರೀಶ್ ಕೊಡಿಸಿದ್ದು, ಅವುಗಳನ್ನು ತೆಗೆದುಕೊಂಡು ಹೋಗುವುದಾಗಿ ದರ್ಶನ್, ಪೃಥ್ವಿ ಇತರರು ಮೇಘನಾ ಮನೆಗೆ ಬಂದಿದ್ದಾರೆ.

ಈ ಸಂದರ್ಭದಲ್ಲಿ ಮೇಘನಾ ಹಾಗೂ ಯುವಕರ ನಡುವೆ ಜಟಾಪಟಿ ನಡೆದು, ಮೇಘನಾ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...