alex Certify
ಕನ್ನಡ ದುನಿಯಾ       Mobile App
       

Kannada Duniya

ಸಹಚರರ ಜೊತೆ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ನಟಿ ಕಾರ್ ನೊಂದಿಗೆ ಪರಾರಿ

ನಟಿಯೊಬ್ಬಳು ಹಣಕಾಸಿನ ವ್ಯವಹಾರ ಸಂಬಂಧ ತನ್ನ ಸಹಚರರ ಜೊತೆಗೂಡಿ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಟಿ ಸುಷ್ಮಿತಾ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆದಿಶಕ್ತಿ ಮಹಿಳಾ ಸಂಘದ ಕಾರ್ಯಕರ್ತ ರಘು ಎಂಬವರು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸುಷ್ಮಿತಾ ಹಾಗೂ ರಘು ಹಣ ಸಂಪಾದನೆಗಾಗಿ ಸಂಘವೊಂದನ್ನು ಹುಟ್ಟು ಹಾಕಿದ್ದರೆಂದು ಹೇಳಲಾಗಿದ್ದು, ರಘು ತಮಗೆ ಮೋಸ ಮಾಡುತ್ತಿದ್ದಾನೆ ಎಂದು ಭಾವಿಸಿ ಸುಷ್ಮಿತಾ ತನ್ನ ಸಹಚರರ ಜೊತೆ ಸೇರಿ ಹಲ್ಲೆ ನಡೆಸಿದ್ದಾರೆಂದು ಹೇಳಲಾಗಿದೆ.

ತನ್ನ ಮೇಲೆ ಹಲ್ಲೆ ನಡೆಸಿ ಕಾರು ಹಾಗೂ ಲ್ಯಾಪ್ಟಾಪ್ ನೊಂದಿಗೆ ಪರಾರಿಯಾಗಿದ್ದಾರೆಂದು ರಘು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...