alex Certify
ಕನ್ನಡ ದುನಿಯಾ       Mobile App
       

Kannada Duniya

ಇಂತಹ ಕೃತ್ಯವೆಸಗಿ ಪರಾರಿಯಾದ ನಟಿ….

ಬೆಂಗಳೂರು: ಅಪಘಾತವೆಸಗಿ ನಟಿ ಹಾಗೂ ಸಹಚರರು ಪರಾರಿಯಾದ ಘಟನೆ ನೆಲಮಂಗಲ 8 ನೇ ಮೈಲು ಬಳಿ ನಡೆದಿದೆ.

ಬಿಡದಿ ನಿತ್ಯಾನಂದ ಸ್ವಾಮಿ ಶಿಷ್ಯೆ ರಂಜಿತಾ ಹಾಗೂ ಸಹಚರರು ಆಶ್ರಮದ ಕಾರಿನಲ್ಲಿ ಬೆಂಗಳೂರು ಕಡೆಗೆ ಪ್ರಯಾಣಿಸುವಾಗ, ಚಿಕ್ಕಬಿದಿರಕಲ್ಲು ಬಳಿ, ಚಾಲಕನ ನಿಯಂತ್ರಣ ತಪ್ಪಿದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ.

ಬೈಕ್ ನಲ್ಲಿದ್ದ ಇಬ್ಬರು ಸವಾರರು ಗಾಯಗೊಂಡಿದ್ದು, ಅಪಘಾತದ ನಂತರ ಕಾರಿನ ಸಮೇತ ರಂಜಿತಾ ಹಾಗೂ ಅವರೊಂದಿಗೆ ಇದ್ದವರು ಪರಾರಿಯಾಗಿದ್ದಾರೆ.

ನೆಲಮಂಗಲ 8 ನೇ ಮೈಲು ಬಳಿ ಕಾರನ್ನು ಅಡ್ಡ ಹಾಕಿದ ಸ್ಥಳೀಯರು ಕಲ್ಲು ತೂರಿ ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ರಂಜಿತಾ ಮತ್ತು ಅವರೊಂದಿಗೆ ಇದ್ದ ಮಹಿಳೆಯರು ಬೇರೆ ಕಾರಿನಲ್ಲಿ ಪರಾರಿಯಾಗಿದ್ದಾರೆ.

ಅಪಘಾತವೆಸಗಿದ ಕಾರು ಹಾಗೂ ಒಂದಿಬ್ಬರನ್ನು ವಶಕ್ಕೆ ಪಡೆದ ನೆಲಮಂಗಲ ಸಂಚಾರ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಗಾಯಾಳುಗಳ ಸಂಬಂಧಿಕರು ಠಾಣೆಗೆ ದೌಡಾಯಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...