alex Certify
ಕನ್ನಡ ದುನಿಯಾ       Mobile App
       

Kannada Duniya

1 ಗಂಟೆಯಲ್ಲೇ 2 ಅಪಘಾತ, ಮೂವರು ಸಾವು

acc-tumk

ತುಮಕೂರು: ಒಂದೇ ಒಂದು ಗಂಟೆ ಅವಧಿಯಲ್ಲಿ, ಒಂದೇ ಸ್ಥಳದಲ್ಲಿ ನಡೆದ 2 ಅಪಘಾತ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ತುಮಕೂರು ಜಿಲ್ಲೆ ಕೊರಟಗೆರೆ ಸಮೀಪದ ಥರಟಿ ಗ್ರಾಮದ ಸಮೀಪ, ಅವೈಜ್ಞಾನಿಕವಾಗಿ ಹಂಪ್ಸ್ ಹಾಕಿರುವುದೇ ಅಪಘಾತಕ್ಕೆ ಕಾರಣವಾಗಿದೆ.

ಈ ಸ್ಥಳದಲ್ಲಿ ವೇಗವಾಗಿ ಬಂದ ವಾಹನ ಸವಾರರಿಗೆ ನಿಯಂತ್ರಣ ಸಿಗದೇ, ಅಪಘಾತಗಳು ಸಂಭವಿಸುತ್ತಿವೆ.

ನಿನ್ನೆ ರಾತ್ರಿ ಹಂಪ್ಸ್ ಬಳಿ ಹಿಂಬದಿಯಿಂದ ಕಾರ್ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ಕರಿಯಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದಾದ ನಂತರ ಖಾಸಗಿ ಬಸ್, ಬೈಕ್ ಗೆ ಡಿಕ್ಕಿ ಹೊಡೆದು, ಬೈಕ್ ಸವಾರರಾದ ರಾಜೇಂದ್ರ ಹಾಗೂ ಕೇಶವಮೂರ್ತಿ ಎಂಬುವವರು ಸಾವನ್ನಪ್ಪಿದ್ದಾರೆ.

ಮತ್ತೊಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...