alex Certify
ಕನ್ನಡ ದುನಿಯಾ       Mobile App
       

Kannada Duniya

‘ಎದೆ ತುಂಬಿ ಹಾಡುವೆನು’ ಗಾಯಕಿಯ ದುರಂತ ಸಾವು

accident_0mnj

ಖ್ಯಾತ ಗಾಯಕರಿಂದ ಸೈ ಎನಿಸಿಕೊಂಡಿದ್ದ ‘ಮಧುರ’ ಕಂಠದ ಗಾಯಕಿ ಹಾಗೂ ‘ಎದೆ ತುಂಬಿ ಹಾಡುವೆನು’ ವಿನ್ನರ್ ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಧುರಾ ಮೃತಪಟ್ಟ ಗಾಯಕಿ. ಬೆಂಗಳೂರಿನ ಕಬ್ಬನ್ ರೋಡ್ ನಲ್ಲಿ ನಡೆದ ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆ.

ಖಾಸಗಿ ವಾಹಿನಿಯೊಂದರಲ್ಲಿ ಖ್ಯಾತ ಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದ ಮೊದಲ ಸೀಸನ್ ಸ್ಪರ್ಧಿಯಾಗಿದ್ದ ಮಧುರಾ ವಿನ್ನರ್ ಆಗಿದ್ದರು. ತಮ್ಮ ಮಧುರ ಕಂಠದಿಂದಲೇ ಖ್ಯಾತ ಗಾಯಕರ ಮೆಚ್ಚುಗೆಗೂ ಪಾತ್ರರಾಗಿ ವೀಕ್ಷಕರಿಂದಲೂ ಪ್ರಶಂಸೆ ಪಡೆದುಕೊಂಡಿದ್ದರು. ಆದರೆ ಹಾಲಿನ ಕ್ಯಾಂಟರ್ ರೂಪದಲ್ಲಿ ಬಂದ ಜವರಾಯ ಅವರ ಉಸಿರನ್ನೇ ನಿಲ್ಲಿಸಿದ್ದಾನೆ. 25 ವರ್ಷ ವಯಸ್ಸಿನ ಮಧುರಾ ಎಂ.ಟೆಕ್. ಮುಗಿಸಿ 4 ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದರು.

ಹೋಂಡಾ ಆಕ್ಟಿವಾದಲ್ಲಿ ತಮ್ಮ ಗೆಳತಿ ಶುಭಾ ಅವರೊಂದಿಗೆ ಹಿಂಬದಿಯಲ್ಲಿ ಕುಳಿತು ಹೋಗುತ್ತಿದ್ದ ಸಂದರ್ಭದಲ್ಲಿ ಕ್ಯಾಂಟರ್ ಡಿಕ್ಕಿ ಹೊಡೆದು ಅವರ ಮೇಲೆಯೇ ಹರಿದು ಸ್ಥಳದಲ್ಲೇ ಸಾವು ಕಂಡಿದ್ದಾರೆ. ಇಬ್ಬರೂ ಹೆಲ್ಮೆಟ್ ಧರಿಸಿದ್ದರಾದರೂ ಬಚಾವಾಗಲು ಸಾಧ್ಯವಾಗಿಲ್ಲ. ಶುಭಾ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...