alex Certify
ಕನ್ನಡ ದುನಿಯಾ       Mobile App
       

Kannada Duniya

ಹುಟ್ಟುಹಬ್ಬದ ದಿನವೇ ದುರಂತ ಸಾವು ಕಂಡ ಬಾಲಕ

1.8673252

ಶಿವಮೊಗ್ಗ: ಹುಟ್ಟುಹಬ್ಬದ ದಿನವಾದ್ದರಿಂದ ಬೆಳಿಗ್ಗೆಯೇ ಬೇಗನೆ ಎದ್ದ ಬಾಲಕ ಖುಷಿ ಸಂಭ್ರಮದಿಂದ ಶಾಲೆಗೆ ಹೋಗಲು ರೆಡಿಯಾಗಿದ್ದಾನೆ. ಸ್ನೇಹಿತರಿಗೆ ಹಂಚಲು ಚಾಕೊಲೇಟ್ ಖರೀದಿಸಿದ್ದಾನೆ. ಪೋಷಕರಿಗೆ ಹೇಳಿ ಸೈಕಲ್ ನಲ್ಲಿ ಶಾಲೆಗೆ ಹೊರಟ ಬಾಲಕ ಸ್ವಲ್ಪ ದೂರ ಬಂದಿದ್ದನಷ್ಟೇ. ಅಷ್ಟರಲ್ಲಿಯೇ ದುರಂತವೊಂದು ನಡೆದು ಹೋಗಿದೆ.

ಶಾಲೆಗೆ ಸೈಕಲ್ ಮೇಲೆ ತೆರಳುತ್ತಿದ್ದ ಬಾಲಕ ಶರತ್ (13) ಬಲಿಯಾಗಿದ್ದಾನೆ. ಈತನ ಮೇಲೆಯೇ ಬಸ್ ಹರಿದಿದ್ದರಿಂದಾಗಿ ತಲೆ, ಛಿದ್ರವಾಗಿ ಹೋಗಿದೆ. ಬೆಳಿಗ್ಗೆ 9.45 ರ ಸುಮಾರಿಗೆ ವಿದ್ಯಾನಗರದಿಂದ ದುರ್ಗಿಗುಡಿ ಶಾಲೆಗೆ ತೆರಳುತ್ತಿದ್ದ ವೇಳೆ ಸಿಟಿಬಸ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಘಟನೆ ನಡೆದ ಕೂಡಲೇ ಚಾಲಕ ಬಸ್ ನಿಲ್ಲಿಸಿ ಪರಾರಿಯಾಗಿದ್ದಾನೆ.

ಸ್ನೇಹಿತರಿಗೆ ಹಂಚಲು ತಂದಿದ್ದ ಚಾಕೊಲೇಟ್, ಸೈಕಲ್, ಸ್ಕೂಲ್ ಬ್ಯಾಗ್ ಜೊತೆಯಲ್ಲಿ ಬಾಲಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ದೃಶ್ಯ ಮನಕಲಕುವಂತಿತ್ತು. ಅಂದ ಹಾಗೇ ಈ ಘಟನೆ ನಡೆದಿದ್ದು, ಶಿವಮೊಗ್ಗ ನಗರದ ‘ಅಪಘಾತಗಳ ರಸ್ತೆ’ ಎಂದೇ ಕುಖ್ಯಾತವಾಗಿರುವ ವಿದ್ಯಾನಗರ ರಸ್ತೆಯಲ್ಲಿ. ಈ ದೃಶ್ಯವನ್ನು ಕಂಡವರೆಲ್ಲಾ ಮಮ್ಮಲ ಮರುಗಿದರು. ಘಟನೆಗೆ ಕಾರಣರಾದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...