alex Certify
ಕನ್ನಡ ದುನಿಯಾ       Mobile App
       

Kannada Duniya

ಹುಬ್ಬಳ್ಳಿಯಲ್ಲಿ ನಡೆದ ಭೀಕರ ಅಪಘಾತದ ಹಿಂದಿದೆ ಬೆಚ್ಚಿ ಬೀಳಿಸುವ ಸತ್ಯ

ಹುಬ್ಬಳ್ಳಿ: ಅಪರಾಧಿ ಎಷ್ಟೇ ಚಾಣಕ್ಷನಾಗಿದ್ದರೂ ಒಂದಲ್ಲ ಒಂದು ದಿನ ಪೊಲೀಸರು ಬೀಸಿದ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ ಎಂಬುದಕ್ಕೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಬೈಕ್ ಅಪಘಾತದ ರೀತಿಯಲ್ಲಿ ನಡೆದ ಯುವಕನೊಬ್ಬನ ಕೊಲೆಯ ರಹಸ್ಯವೇ ಒಂದು ಮುಖ್ಯ ನಿದರ್ಶನ.

ಇತ್ತೀಚೆಗೆ ಹುಬ್ಬಳ್ಳಿಯ ಗೋಕುಲ ರಸ್ತೆಯ ವಿಭಜಕಕ್ಕೆ ಬೈಕ್ ಒಂದು ಡಿಕ್ಕಿ ಹೊಡೆದು ಭೀಕರ ಅಪಘಾತವಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದ. ಆದರೆ ಆತನ ಮುಖ ಗುರುತು ಸಿಗದಷ್ಟು ತೀವ್ರವಾಗಿ ನಜ್ಜುಗುಜ್ಜಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಿದರು. ನಂತರ ಬೈಕ್ ನಂಬರ್ ಪರಿಶೀಲನೆ ಮಾಡಿದ ಪೊಲೀಸರಿಗೆ ಅದು ಗೋಕುಲ ಗ್ರಾಮದ ಸಂಜು ಬೆಂಗೇರಿ ಎಂಬಾತನಿಗೆ ಸೇರಿದ ಬೈಕ್ ಎಂಬುದಾಗಿ ತಿಳಿದುಬಂದ ಕಾರಣ ಆತನ ಮನೆಯವರಿಗೆ ವಿಷಯ ತಿಳಿಸಿದ್ದಾರೆ.

ಆದರೆ ಸ್ಥಳಕ್ಕೆ ಬಂದ ಸಂಜು ಬೆಂಗೇರಿಯ ಅಣ್ಣ ಮಂಜು ಬೆಂಗೇರಿ ಅಲ್ಲಿದ್ದ ಬಟ್ಟೆ, ಚಪ್ಪಲಿ ಮತ್ತು ಬೈಕ್ ಸಂಜುಗೆ ಸೇರಿದಾಗಿದ್ದು, ಆದರೆ ಈ ಮೃತದೇಹ ಮಾತ್ರ ತನ್ನ ತಮ್ಮನದ್ದಲ್ಲ ಎಂಬುದಾಗಿ ಖಚಿತಪಡಿಸಿದ್ದಾನೆ. ಆಗ ಅನುಮಾನಗೊಂಡ ಪೊಲೀಸರಿಗೆ ಅದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಘಟನೆಯ ಬೆನ್ನಟ್ಟಿ ಹೊರಟ ಪೊಲೀಸರು ಆತನ ಆಪ್ತ ಸ್ನೇಹಿತರಾದ ಮಹಾಂತೇಶ್ ದುಗ್ಗಾನಿ ಹಾಗೂ ಅಮೀರ್ ಶೇಖ್ರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಹೇಳಿದ ನಿಜಾಂಶ ಕೇಳಿ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ.

ಅದೇನೆಂದರೆ ಸಂಜು ಹೆಸರಿನಲ್ಲಿದ್ದ ಐವತ್ತು ಲಕ್ಷ ರೂಪಾಯಿ ವಿಮೆ ಹಣಕ್ಕಾಗಿ ಸಂಜು ಮತ್ತು ಆತನ ಸ್ನೇಹಿತರು ಸೇರಿ ಈ ಮಾಸ್ಟರ್ ಪ್ಲಾನ್ ಮಾಡಿದ್ದರಂತೆ. ಯುವಕನೊಬ್ಬನನ್ನು ಕರೆತಂದು ಸಂಜುನಂತೆ ಹೇರ್ ಕಟಿಂಗ್ ಮಾಡಿಸಿ, ಬಟ್ಟೆ ಹಾಕಿ ನಂತರ ಆ ಯುವಕನನ್ನು ಕೊಲೆ ಮಾಡಿ ಅಪಘಾತವಾಗಿದೆ ಎಂಬಂತೆ ಬಿಂಬಿಸಿರುವುದಾಗಿ ಅವರೇ ಒಪ್ಪಿಕೊಂಡಿದ್ದಾರೆ. ಸದ್ಯ ಇವರಿಬ್ಬರನ್ನು ಬಂಧಿಸಿದ ಪೊಲೀಸರು ಪರಾರಿಯಾಗಿರುವ ಸಂಜುಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ. ಆದರೆ ಕೊಲೆಯಾದ ಯುವಕ ಮಾತ್ರ ಯಾರೆಂಬುದು ಇನ್ನು ತಿಳಿದುಬಂದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...