alex Certify
ಕನ್ನಡ ದುನಿಯಾ       Mobile App
       

Kannada Duniya

ಲಾಠಿಯಿಂದ ತಪ್ಪಿಸಿಕೊಳ್ಳಲೋಗಿ ಲಾರಿ ಅಡಿ ಸಿಕ್ಕು ದುರಂತ ಸಾವು

acc 28ಊರಿಗೆ ಹೋಗಿದ್ದ ಯುವಕನೊಬ್ಬ ಬೈಕ್ ನಲ್ಲಿ ವಾಪಾಸ್ ಬೆಂಗಳೂರಿಗೆ ಬರುವ ವೇಳೆ ವಾಹನಗಳ ತಪಾಸಣೆ ನಡೆಸುತ್ತಿದ್ದ ಪೊಲೀಸರು ಆತನಿಗೆ ಬೈಕ್ ನಿಲ್ಲಿಸಲು ಸೂಚಿಸಿ ಲಾಠಿ ಬೀಸಿದಾಗ ಅದರಿಂದ ತಪ್ಪಿಸಿಕೊಳ್ಳಲು ಹೋಗಿ ಲಾರಿಗೆ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ಕಗ್ಗಲೀಪುರದಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಅಕ್ಕನ ಮನೆಯಲ್ಲಿದ್ದುಕೊಂಡು ಕಾರು ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ 22 ವರ್ಷದ ಮಂಜು ನಾಯ್ಕ ಮೃತಪಟ್ಟ ಯುವಕನಾಗಿದ್ದು, ಈತ ಬೈಕ್ ನಲ್ಲಿ ಬರುವಾಗ ಕಗ್ಗಲೀಪುರ ಪೊಲೀಸ್ ಠಾಣೆ ಮುಂದೆ ಮುಖ್ಯ ಪೇದೆ ರಾಮಚಂದ್ರಪ್ಪ ಲಾಠಿ ಬೀಸಿದರೆನ್ನಲಾಗಿದೆ.

ಇದರಿಂದ ತಪ್ಪಿಸಿಕೊಳ್ಳಲು ಮಂಜುನಾಯ್ಕ ಮುಂದಾದ ವೇಳೆ, ಲಾರಿಗೆ ಸಿಲುಕಿದ್ದು ಸಾವನ್ನಪ್ಪಿದ್ದಾನೆ. ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...