alex Certify
ಕನ್ನಡ ದುನಿಯಾ       Mobile App
       

Kannada Duniya

ಕುದುರೆಗಳ ಕಾರಣಕ್ಕೆ ನಡೆದಿದೆ ಸರಣಿ ಅಪಘಾತ

ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ಆಯಕಟ್ಟಿನ ಜಾಗಗಳಲ್ಲಿ ಬೀಡಾಡಿ ಹಸು, ಕುದುರೆಗಳ ಹಾವಳಿ ವಿಪರೀತವಾಗಿದ್ದು, ಇಂದು ಬೆಳಿಗ್ಗೆ ವಿದ್ಯಾನಗರ ಮುಖ್ಯರಸ್ತೆಯಲ್ಲಿ ಕುದುರೆಗಳು ಅಡ್ಡ ಬಂದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ.

ಶಿವಮೊಗ್ಗ-ಭದ್ರಾವತಿ ಮುಖ್ಯ ರಸ್ತೆಯಲ್ಲಿನ ವಿದ್ಯಾನಗರ ಸಂಚಾರಿ ಪೊಲೀಸ್ ಠಾಣೆ ಸಮೀಪದಲ್ಲಿ 10ಕ್ಕೂ ಹೆಚ್ಚು ಬೀಡಾಡಿ ಕುದುರೆಗಳು ರಸ್ತೆಗೆ ಏಕಾಏಕಿ ನುಗ್ಗಿವೆ. ಪರಿಣಾಮ ಭದ್ರಾವತಿ ಕಡೆಗೆ ಸಂಚರಿಸುತ್ತಿದ್ದ ಐದಕ್ಕೂ ಹೆಚ್ಚು ವಾಹನಗಳ ನಡುವೆ ಸರಣಿ ಅಪಘಾತ ಉಂಟಾಗಿದೆ.

ಕುದುರೆಗಳು ರಸ್ತೆಗೆ ಅಡ್ಡ ಬಂದ ಪರಿಣಾಮ ಅಪಘಾತವಾಗುವುದನ್ನು ತಪ್ಪಿಸಲು ಗೂಡ್ಸ್ ಆಟೋ ಚಾಲಕ ಬ್ರೇಕ್ ಹಾಕಿದ್ದಾನೆ. ಆಟೋ ಹಿಂಭಾಗದಲ್ಲಿ ಬರುತ್ತಿದ್ದ ಟ್ರ್ಯಾಕ್ಸ್, ಮಾರುತಿ ಸ್ವಿಫ್ಟ್, ಮಾರುತಿ 800 ಹಾಗೂ ಟೊಯೋಟೋ ಇಟಿಯೋಸ್ ವಾಹನಗಳು ಪರಸ್ಪರ ಹಿಂದಿನಿಂದ ಡಿಕ್ಕಿ ಹೊಡೆದುಕೊಂಡಿವೆ. ಅದೃಷ್ಟವಶಾತ್ ವಾಹನದಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ. ಅಪಘಾತದಿಂದಾಗಿ ಕೆಲ ಕಾಲ ರಸ್ತೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...