alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಘಾತದಲ್ಲಿ ಸ್ವಾಮೀಜಿ ಸೇರಿ ಇಬ್ಬರ ಸಾವು

ದಾವಣಗೆರೆ: ಲಾರಿ ಹರಿದು ಸ್ವಾಮೀಜಿ ಸೇರಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆ ಹೊರವಲಯದ ಕಲ್ಪನಹಳ್ಳಿ ಬಳಿ ನಡೆದಿದೆ.

ಗುಜರಾತ್ ಮೂಲದ 55 ವರ್ಷದ ಸ್ವಾಮೀಜಿ ಹಾಗೂ ಹೂವಿನ ವ್ಯಾಪಾರಿ ಗಂಗಾಧರ್ ಮೃತಪಟ್ಟವರೆಂದು ಗುರುತಿಸಲಾಗಿದೆ.

ಗುಜರಾತ್ ನಿಂದ ಐವರು ಸ್ವಾಮೀಜಿಗಳ ತಂಡ ಮೈಸೂರಿಗೆ ಪಾದಯಾತ್ರೆಯಲ್ಲಿ ಹೊರಟಿದ್ದು, ಕಲ್ಪನಹಳ್ಳಿ ಬಳಿ ಹೂವು ಖರೀದಿಸುತ್ತಿದ್ದರು. ಈ ವೇಳೆ ಅತಿವೇಗವಾಗಿ ಬಂದ ಲಾರಿಯೊಂದು ಇವರ ಮೇಲೆಯೇ ಚಲಿಸಿದೆ.

ಪೊಲೀಸರು ಲಾರಿ ಚಾಲಕ ನಾಸೀರ್ ನನ್ನು ಬಂಧಿಸಿ, ಲಾರಿಯನ್ನು ಜಪ್ತಿ ಮಾಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...