alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಮರಾಜನಗರದಲ್ಲಿ ಬೆಳ್ಳಂಬೆಳಿಗ್ಗೆ ನಡೀತು ದುರ್ಘಟನೆ

acc ju 15 m

ಚಾಮರಾಜನಗರ: ಪಾದಚಾರಿಗಳ ಮೇಲೆ ಲಾರಿ ಚಲಿಸಿದ ಪರಿಣಾಮ, ಇಬ್ಬರು ಸಾವು ಕಂಡು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ, ಚಾಮರಾಜನಗರ ಜಿಲ್ಲೆಯ ಅಂಕಲೇಶಪುರ ಸಮೀಪ ನಡೆದಿದೆ. ಸ್ಥಳದಲ್ಲೇ ಒಬ್ಬರು ಸಾವು ಕಂಡಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

40 ವರ್ಷದ ಶಿವಮಲ್ಲಾಚಾರ್ ಹಾಗೂ 45 ವರ್ಷದ ಸಂಪತ್ ಮೃತಪಟ್ಟವರು. ಪ್ರಮೀಳಾ ಮತ್ತು ನಾಗಮ್ಮ ಎಂಬ ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಬೆಳಿಗ್ಗೆ ಇವರೆಲ್ಲಾ ಚಾಮರಾಜನಗರ ತಾಲ್ಲೂಕಿನ ಅಂಕಲೇಶಪುರದ ಬಳಿ ರಸ್ತೆ ಬದಿಯಲ್ಲಿ ವಾಕಿಂಗ್ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಬಲಭಾಗದಿಂದ ವೇಗವಾಗಿ ಬಂದ ಲಾರಿ, ಇವರ ಮೇಲೆಯೇ ಹರಿದು ಸ್ಥಳದಲ್ಲೇ ಶಿವಮಲ್ಲಾಚಾರ್ ಮೃತಪಟ್ಟಿದ್ದಾರೆ.

ಅಪಘಾತದ ನಂತರ ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ಲಾರಿ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ರಾಮಸಮುದ್ರ ಠಾಣೆ ಪೊಲೀಸರು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...