alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಳ್ಳಂಬೆಳಿಗ್ಗೆ ದಾಳಿ, ಭ್ರಷ್ಟರಿಗೆ ಬಿಸಿಮುಟ್ಟಿಸಿದ ಎ.ಸಿ.ಬಿ. ಅಧಿಕಾರಿಗಳು

ರಾಜ್ಯದ ವಿವಿಧೆಡೆ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ದಾವಣಗೆರೆ, ಧಾರವಾಡ, ಹುಬ್ಬಳ್ಳಿಯಲ್ಲಿ ವಿವಿಧ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ಮಾಡಲಾಗಿದೆ.

ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕು ಮಡ್ರಳ್ಳಿ ಗ್ರಾಮಪಂಚಾಯಿತಿ ಪಿ.ಡಿ.ಓ. ನಾಗರಾಜ್ ನಿವಾಸದ ಮೇಲೆ ದಾಳಿ ಮಾಡಲಾಗಿದ್ದು, ದಾಳಿಯ ಸಂದರ್ಭದಲ್ಲಿ ಆದಾಯ ಮೀರಿ ಸಂಪತ್ತು ಹೊಂದಿರುವುದು ಗೊತ್ತಾಗಿದೆ. ಐಷಾರಾಮಿ ಕಾರುಗಳು, ವಿವಿಧೆಡೆ ಮನೆಗಳನ್ನು ಹೊಂದಿರುವುದು ಕಂಡು ಬಂದಿದ್ದು, ಪರಿಶೀಲನೆ ಕಾರ್ಯ ಮುಂದುವರೆದಿದೆ. ಎಸಿಬಿ ಎಸ್.ಪಿ. ವಂಶಿಕೃಷ್ಣ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಧಾರವಾಡದ ವಿನಾಯಕ ನಗರದಲ್ಲಿ ಅರಣ್ಯ ಇಲಾಖೆ ಎ.ಸಿ.ಎಫ್. ಪಾರ್ಶ್ವನಾಥ ಅವರ ನಿವಾಸದ ಮೇಲೆ, ಹುಬ್ಬಳ್ಳಿಯ ಶಿರೂರ್ ಪಾರ್ಕ್ ಬಳಿ ಕೆ.ಪಿ.ಟಿ.ಸಿ.ಎಲ್. ಎಇ ಮಲ್ಲಿಕಾರ್ಜುನ ಅವರ ನಿವಾಸದ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ. ಎಸಿಬಿ ಡಿ.ವೈ.ಎಸ್.ಪಿ. ವಿಜಯಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...