alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ಲಿಂಕ್ ಮಾಡದ ರೈತರಿಗೆ ಶಾಕಿಂಗ್ ನ್ಯೂಸ್….!

ಬೆಂಗಳೂರು: ತಮ್ಮ ಖಾತೆಗಳಿಗೆ ಆಧಾರ್ ಜೋಡಣೆ ಮಾಡದ ರೈತರಿಗೆ ಮಾಹಿತಿಯೊಂದು ಇಲ್ಲಿದೆ. ಹಾಲು ಉತ್ಪಾದಕರಿಗೆ ಸರ್ಕಾರದ ಸಹಾಯಧನವನ್ನು ಬ್ಯಾಂಕ್ ಖಾತೆಗಳ ಮೂಲಕ ನೀಡಲಾಗುತ್ತದೆ.

ಆದರೆ, ಖಾತೆಗಳಿಗೆ ಆಧಾರ್ ಲಿಂಕ್ ಮಾಡದ ರೈತರಿಗೆ ಸಹಾಯಧನ ಸಿಗದಂತಾಗಿದೆ. ಫಲಾನುಭವಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಯವರು ಬ್ಯಾಂಕ್ ಅಧಿಕಾರಿಗಳಿಗೆ ಹಿಂದೆಯೇ ಸೂಚನೆ ನೀಡಿದ್ದಾರೆ. ಆದರೂ ಕೆಲವು ರಾಷ್ಟ್ರೀಕೃತ ಬ್ಯಾಂಕ್ ಗಳು ಸ್ಪಂದಿಸಿಲ್ಲ. ಇದರಿಂದಾಗಿ ಸಮಸ್ಯೆಯಾಗಿದ್ದು, ಕೆ.ಎಂ.ಎಫ್. ಅಧಿಕಾರಿಗಳು ಪಶುಸಂಗೋಪನೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಅನೇಕ ಕಡೆಗಳಲ್ಲಿ ಹಾಲು ಉತ್ಪಾದಕರು ಆಧಾರ್ ಕಾರ್ಡ್ ಗಳನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಲ್ಲ. ಕೆಲವು ರೈತರು 2 ಖಾತೆಗಳನ್ನು ನೀಡಿದ್ದಾರೆ. ಇದರಿಂದಾಗಿ ರೈತರ ಖಾತೆಗೆ ಜಮಾ ಆಗಬೇಕಿದ್ದ ಹಣ ಹಾಲು ಒಕ್ಕೂಟಗಳಿಗೆ ವಾಪಸ್ ಬಂದಿದೆ.

ಹೆಚ್ಚಿನ ಸಂಖ್ಯೆಯ ಹಾಲು ಉತ್ಪಾದಕರು ಆಧಾರ್ ಲಿಂಕ್ ಮಾಡಿಸಿದ್ದು, ಸಹಾಯಧನ ಪಡೆದುಕೊಂಡಿದ್ದಾರೆ. ಆದರೂ, ಇನ್ನೂ ಹಲವು ರೈತರು ಆಧಾರ್ ಲಿಂಕ್ ಮಾಡಿಸದ ಕಾರಣ, ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಆಧಾರ್ ಲಿಂಕ್ ಮಾಡಿಸಿ ಪ್ರೋತ್ಸಾಹಧನ ಪಡೆಯುವಂತೆ ರೈತರಿಗೆ ಸೂಚಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...