alex Certify
ಕನ್ನಡ ದುನಿಯಾ       Mobile App
       

Kannada Duniya

ಬೋಸ್ಟನ್ ಬಾಂಬ್ ಪ್ರಕರಣ ತನಿಖೆ ಮಾದರಿಯಲ್ಲೇ ನಡೆಸಲಾಗಿತ್ತು ಗೌರಿ ಹತ್ಯೆ ಕೇಸ್

ಕಳೆದ ವರ್ಷ ಬೆಂಗಳೂರಿನ ತಮ್ಮ ಮನೆ ಮುಂದೆಯೇ ಹಂತಕರ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣ ರಹಸ್ಯವನ್ನು ಭೇದಿಸಿದ್ದು ಹೇಗೆ ಗೊತ್ತಾ?

ಕಳೆದೊಂದು ವರ್ಷದಿಂದಲೂ ಈ ಬಗ್ಗೆ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಲೇ ಇದ್ದ ವಿಶೇಷ ತನಿಖಾ ತಂಡ(ಎಸ್ಐಟಿ) ಇದೀಗ ಬಹುತೇಕ ಆರೋಪಿಗಳನ್ನು ಸೆರೆ ಹಿಡಿದಿದೆ. ಇದರ ಹಿಂದೆ ಕೆಲಸ ಮಾಡಿರುವುದು 2013ರ ಬೋಸ್ಟನ್ ಮ್ಯಾರಥಾನ್ ಬಾಂಬ್ ಸ್ಫೋಟ ಪ್ರಕರಣದ ತನಿಖಾ ಮಾದರಿ ಎಂದು ಹೇಳಲಾಗಿದೆ.

ಮ್ಯಾರಥಾನ್ ನ ಫಿನಿಶಿಂಗ್ ಲೈನ್ ನ ಬಳಿ ನಡೆದ ಈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮೂವರು ಮೃತಪಟ್ಟು 267ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಆ ಮ್ಯಾರಥಾನ್ ನ ಟ್ರ್ಯಾಕ್ ಗಳ ಉದ್ದಗಲಕ್ಕೂ ಅಳವಡಿಸಿದ್ದ ಕ್ಯಾಮೆರಾಗಳಲ್ಲಿನ ಫೂಟೇಜ್ ಅನ್ನು ಜಾಲಾಡಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಗೌರಿ ಹತ್ಯೆ ಪ್ರಕರಣದಲ್ಲೂ ಇದೇ ಮಾದರಿಯನ್ನು ಅನುಸರಿಸಿದ ಎಸ್ಐಟಿ ಹತ್ಯೆಯಾದ ಗೌರಿ ಲಂಕೇಶ್ ಅವರ ರಾಜರಾಜೇಶ್ವರಿನಗರದ ಮನೆಗೆ ಬರುವ ಎಲ್ಲಾ ರಸ್ತೆಗಳಲ್ಲಿ ಅಳವಡಿಸಲಾಗಿರುವ ಸುಮಾರು 200ಕ್ಕೂ ಅಧಿಕ ಸಿಸಿ ಟಿವಿ ಫೂಟೇಜ್ ಗಳನ್ನು ಜಾಲಾಡಿತ್ತು. ರಾಜರಾಜೇಶ್ವರಿ ನಗರ ಮತ್ತು ಮೈಸೂರು ರಸ್ತೆಗಳಲ್ಲಿ ಅಳವಡಿಸಲಾಗಿದ್ದ ಈ ಕ್ಯಾಮೆರಾಗಳ ಡಿಜಿಟಲ್ ವಿಡಿಯೋ ರೆಕಾರ್ಡ ರ್ ಗಳಲ್ಲಿದ್ದ ಡಾಟಾವೇ ಸುಮಾರು 180 ಟಿಬಿ ಎಂದು ಹೇಳಲಾಗಿದೆ.

ಇವುಗಳ ಆಧಾರದಲ್ಲಿ ಆರೋಪಿಗಳ ಚಲನವಲನ, ಬಾಡಿ ಲಾಂಗ್ವೆಜ್ ಗಳನ್ನು ಗುರುತಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...