alex Certify
ಕನ್ನಡ ದುನಿಯಾ       Mobile App
       

Kannada Duniya

ರಕ್ಷಾ ಬಂಧನದ ದಿನ ಸಿಕ್ತು ಇಂಥ ವಿಶೇಷ ಉಡುಗೊರೆ

ಭಾನುವಾರ ದೇಶದಾದ್ಯಂತ ರಕ್ಷಾ ಬಂಧನವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಸಹೋದರರ, ಸಹೋದರಿಯರಿಗೆ ರಕ್ಷಣೆ ನೀಡುವ ಭರವಸೆ ಜೊತೆಗೆ ಉಡುಗೊರೆಗಳನ್ನು ನೀಡಿದ್ದಾರೆ. ಬಟ್ಟೆ, ಚಾಕೋಲೇಟ್, ಆಭರಣ ಹೀಗೆ ಬಗೆ ಬಗೆಯ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದ್ರೆ ಬೆಳಗಾವಿ ಸಹೋದರರು ಮಾತ್ರ ಸಹೋದರಿಯರಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.

ಬೆಳಗಾವಿ ಸಹೋದರರು ತಮ್ಮ ಸಹೋದರಿಯರಿಗೆ ಶೌಚಾಲಯವನ್ನು ಉಡುಗೊರೆಯಾಗಿ ನೀಡಿದ್ದಾರೆ. 2400 ಶೌಚಾಲಯವನ್ನು ಉಡುಗೊರೆ ರೂಪದಲ್ಲಿ ನೀಡಲಾಗಿದೆ. ಬೆಳಗಾವಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಈ ಬಗ್ಗೆ ಸಹೋದರರಿಗೆ ಸಲಹೆ ನೀಡಿದ್ದರಂತೆ. ಈ ಬಾರಿ ಶೌಚಾಲಯವನ್ನು ಉಡುಗೊರೆಯಾಗಿ ನೀಡಿ ಎಂದಿದ್ದರಂತೆ.

ಅದ್ರಂತೆ ಸಹೋದರರು ಸಹೋದರಿಯರಿಗೆ ಶೌಚಾಲಯ ನೀಡಿದ್ದಾರೆ. ರಕ್ಷಾ ಬಂಧನದ ದಿನ ಶೌಚಾಲಯದ ಮುಂದೆ ಸಹೋದರರಿಗೆ ಸಹೋದರಿಯರು ರಾಖಿ ಕಟ್ಟಿದ್ದಾರೆ. ಶೌಚಾಲಯ ನಿರ್ಮಾಣಕ್ಕೆ ಸಾಮಾನ್ಯ ವರ್ಗದ ಜನರಿಗೆ 12 ಸಾವಿರ ಹಾಗೂ ಎಸ್ಸಿ, ಎಸ್ಟಿ ಸಮುದಾಯಕ್ಕೆ 15 ಸಾವಿರ ರೂಪಾಯಿ ನೀಡಲಾಗಿತ್ತು. ಕೆಲವರು ತಮ್ಮಲ್ಲಿದ್ದ ಸ್ವಲ್ಪ ಹಣ ಸೇರಿಸಿ ಶೌಚಾಲಯ ನಿರ್ಮಾಣ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...