alex Certify
ಕನ್ನಡ ದುನಿಯಾ       Mobile App
       

Kannada Duniya

ನಂಬಿ ಇಲ್ಲ ಬಿಡಿ! ನಾಯಿ ಕಾರಣಕ್ಕೆ ನಿಂತೋಯ್ತು ಮದುವೆ

A Bengaluru Girl Rejected A Guy For Marriage Because He Didn't Like Dogsಹುಡುಗ ಚೆನ್ನಾಗಿಲ್ಲ ಅಂತಾನೋ, ಮನೆತನ ಸರಿಯಿಲ್ಲ, ಒಳ್ಳೆ ಕೆಲಸವಿಲ್ಲ ಹೀಗೆ ನಾನಾ ಕಾರಣಗಳಿಂದ ಮದುವೆ ಆಫರ್ ತಿರಸ್ಕರಿಸೋದನ್ನು ಕೇಳಿರ್ತೀರಾ. ಆದ್ರೆ ಬೆಂಗಳೂರಲ್ಲೊಬ್ಳು ಯುವತಿ ಹುಡುಗನಿಗೆ ನಾಯಿಗಳನ್ನು ಕಂಡ್ರೆ ಇಷ್ಟವಿಲ್ಲ ಅನ್ನೋ ಕಾರಣಕ್ಕೆ ಅವನನ್ನು ಮದುವೆಯಾಗಲು ಒಲ್ಲೆ ಎಂದಿದ್ದಾಳೆ.

ಮನೆಯಲ್ಲಿ ನಾಯಿ ಸಾಕುವುದು ಬೇಡ ಎಂದಿದ್ದಕ್ಕೆ ಅವಳು ಮದುವೆಯೇ ಬೇಡ ಎಂದಿದ್ದಾಳೆ. ನಮ್ಮಿಬ್ಬರ ಪ್ರೀತಿ ಮಧ್ಯೆ ನಾಯಿ ಬರೋದು ಬೇಡ, ಬೆಡ್ ರೂಂನಲ್ಲಿ ನಾಯಿಗೆ ಎಂಟ್ರಿಯಿಲ್ಲ, ನನ್ನ ತಾಯಿಗೂ ನಾಯಿಗಳೆಂದ್ರೆ ಅಷ್ಟಕ್ಕಷ್ಟೆ ಅಂತಾ ಹುಡುಗ ಖಡಕ್ಕಾಗಿ ಹೇಳಿದ್ದಾನೆ.

ನಾಯಿ ಬಿಟ್ಟಿರೋಕೆ ಸಾಧ್ಯವೇ ಇಲ್ಲ ಅಂತ ಹುಡುಗಿ ಕೂಡ ಪಟ್ಟು ಹಿಡಿದಿದ್ದಾಳೆ. ಹಾಗಿದ್ರೆ ನಾಯಿಯನ್ನೇ ಮದುವೆಯಾಗು ಎಂದ ಹುಡುಗ ಗುಡ್ ಬೈ ಹೇಳಿದ್ದಾನೆ. ಹೀಗೆ ನಾಯಿ ಇವರಿಬ್ಬರ ಮದುವೆಗೆ ಬ್ರೇಕ್ ಹಾಕಿದೆ. ಈ ಸಂಭಾಷಣೆ ತಮಾಷೆಯಾಗಿದ್ರೂ ಕ್ಷುಲ್ಲಕ ಕಾರಣಕ್ಕೆ ಮದುವೆ ಹೇಗೆ ತಪ್ಪಿ ಹೋಗುತ್ತೆ ಅನ್ನೋದಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...