alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕಿ ನುಂಗಿದ್ದ ಮ್ಯಾಗ್ನೆಟ್ ನ್ನ ಹೊರ ತೆಗೆದಿದ್ದು ಹೇಗೆ ಗೊತ್ತಾ?

ಒಂಬತ್ತು ವರ್ಷದ ಬಾಲಕಿಯೊಬ್ಬಳು ಮ್ಯಾಗ್ನೆಟ್ ನುಂಗಿದ್ದು, ಅದನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆ ವೈದ್ಯರು ಅತ್ಯಂತ ಚಾಣಾಕ್ಷತನದಿಂದ ಮತ್ತೊಂದು ಮ್ಯಾಗ್ನೆಟ್ ಬಳಸಿ ಅದನ್ನು ಹೊರ ತೆಗೆದಿದ್ದಾರೆ.

ಬಾಲಕಿ ನುಂಗಿದ್ದ ಮ್ಯಾಗ್ನೆಟ್ ಶ್ವಾಸಕೋಶದಲ್ಲಿ ಸಿಲುಕಿಕೊಂಡಿದ್ದು, ಅದನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲು ವೈದ್ಯರು ನಿರ್ಧರಿಸಿದ್ದರು.

ಆದರೆ ಇದರಿಂದ ಬಾಲಕಿಗೆ ಅಪಾಯ ಆಗಬಹುದೆಂಬ ಕಾರಣಕ್ಕೆ ಮತ್ತೊಂದು ಮ್ಯಾಗ್ನೆಟ್ ಬಳಸಿ ಮತ್ತೊಂದು ಭಾಗಕ್ಕೆ ಚಲಿಸುವಂತೆ ಮಾಡಿದ ವೈದ್ಯರು, ಬಳಿಕ ಚಿಕಿತ್ಸೆ ಮೂಲಕ ಮ್ಯಾಗ್ನೆಟ್ ಹೊರತೆಗೆದಿದ್ದಾರೆ. ಇದೀಗ ಬಾಲಕಿ ಚೇತರಿಸಿಕೊಂಡಿದ್ದು, ಮನೆಗೆ ತೆರಳಿದ್ದಾಳೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...