alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರು ಚಾಲಕನ ಬೋಂಡಾ ಆಸೆಗೆ 7 ಲಕ್ಷ ರೂ. ಕಳೆದುಕೊಂಡ ಉದ್ಯಮಿ

ಬೆಂಗಳೂರು: ದಾವಣಗೆರೆ ಉದ್ಯಮಿಯೊಬ್ಬರು ಹೋಟೆಲ್ ಬಿಲ್ ಪಾವತಿಸಿ ಬರುವಷ್ಟರಲ್ಲಿ ಕಾರಿನಲ್ಲಿಟ್ಟಿದ್ದ 7 ಲಕ್ಷ ರೂ. ಗಳನ್ನು ಕಳ್ಳರು ಕದ್ದೊಯ್ದ ಘಟನೆ ನಡೆದಿದೆ.

ದಾವಣಗೆರೆ ಜಿಲ್ಲೆಯ ಜಗಳೂರಿನ ಉದ್ಯಮಿ ರಾಮಮೂರ್ತಿ ಹಣ ಕಳೆದುಕೊಂಡವರು. ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದ ರಾಮಮೂರ್ತಿ, ಆನಂದ್ ರಾವ್ ಸರ್ಕಲ್ ಬಳಿಯ ಮೌರ್ಯ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಊರಿಗೆ ವಾಪಸ್ಸಾಗಲು ಹಣವಿದ್ದ ಸೂಟ್‌ಕೇಸ್‌ ಹಾಗೂ ಇನ್ನಿತರ ಬ್ಯಾಗ್‌ಗಳನ್ನು ಕಾರಿನಲ್ಲಿಟ್ಟು ಚಾಲಕನನ್ನು ಕೂರಿಸಿ ಹೋಟೆಲ್‌ ಬಿಲ್‌ ಪಾವತಿಸಲು ಹೋಗಿದ್ದಾರೆ.

ಕೆಲ ಹೊತ್ತಿನಲ್ಲಿ ಕಾರ್ ಚಾಲಕ ಪಕ್ಕದಲ್ಲೇ ರಸ್ತೆ ಬದಿ ಮಾರುತ್ತಿದ್ದ ಮೆಣಸಿನ ಕಾಯಿ ಬೋಂಡ ತಿನ್ನಲು ಹೋಗಿದ್ದಾನೆ. ಇದೇ ವೇಳೆ ಕೈಚಳಕ ತೋರಿರುವ ಕಳ್ಳರು, ಕಾರಿನ ಹಿಂಬದಿ ಬಾಗಿಲು ತೆಗೆದು ಹಣವಿದ್ದ ಸೂಟ್‌ಕೇಸ್‌ ತೆಗೆದುಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಉದ್ಯಮಿ ರಾಮಮೂರ್ತಿ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...