alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಬೃಹತ್‌ ಏಕಶಿಲಾ ಹನುಮನ ವಿಗ್ರಹ: ಉತ್ತರಾರ್ಧ ಕೆತ್ತನೆ ಕಾರ್ಯಕ್ಕೆ ಚಾಲನೆ

ವಿಶ್ವದ ಬೃಹತ್‌ ಏಕಶಿಲಾ ಹನುಮನ ಮೂರ್ತಿ ರಾಜಧಾನಿ ಬೆಂಗಳೂರಿನಲ್ಲಿ ತಲೆ ಎತ್ತಲಿದೆ. ಬರೋಬ್ಬರಿ 62 ಅಡಿ ಎತ್ತರದ ಈ ಬೃಹತ್ ಏಕಶಿಲಾ ವಿಗ್ರಹದ ಉತ್ತರಾರ್ಧ ಕೆತ್ತನೆ ಕಾರ್ಯಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಚಾಲನೆ ನೀಡಿದ್ದಾರೆ.

ಎಚ್‌ಬಿಆರ್‌ ಬಡಾವಣೆಯ ಕಾಚರಕನಹಳ್ಳಿಯ ಶ್ರೀ ಕೋದಂಡರಾಮಸ್ವಾಮಿ ದೇಗುಲದ ಪ್ರಾಂಗಣದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮೂರ್ತಿ ಕೆತ್ತನೆಗೆ ಚಾಲನೆ ನೀಡಲಾಯಿತು. ಈಗಾಗಲೇ ಶೇ.35ರಷ್ಟು ಕೆತ್ತನೆ ಕಾರ್ಯ ಮುಗಿದಿರುವ ಈ ಏಕಶಿಲಾ ವಿಗ್ರಹಕ್ಕೆ ಉಳಿದ ಶೇ.65ರಷ್ಟು ಉತ್ತರಾರ್ಧದ ಕೆತ್ತನೆ ಕಾರ್ಯ ಈಗ ಆರಂಭವಾಗಿದೆ.

ಶಿಲ್ಪಿ ಶಿವಾರಪಟ್ಟಣದ ಪಿ. ರಾಜಶೇಖರಾಚಾರ‍್ಯ ನೇತೃತ್ವದಲ್ಲಿ 20 ಮಂದಿ ಶಿಲ್ಪಿಗಳು ಮೂರ್ತಿಯನ್ನು ಕೆತ್ತುತ್ತಿದ್ದಾರೆ. 2020 ರ ಶ್ರೀರಾಮನವಮಿ ಹಬ್ಬಕ್ಕೆ ಮೂರ್ತಿಯನ್ನು ಪ್ರತಿಷ್ಠಾಪನೆಯಾಗಲಿದೆ ಎಂದು ಶ್ರೀ ರಾಮ ವರ್ಧಿನಿ ಟ್ರಸ್ಟ್‌ ಅಧ್ಯಕ್ಷ ಎಂ.ಎನ್‌. ರೆಡ್ಡಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...