alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿ ಬೀಳಿಸುತ್ತೆ ಕರ್ನಾಟಕದಲ್ಲಿ ಸಿಕ್ಕ ಕಪ್ಪು ಹಣದ ವಿವರ

money_1481787190

ನೋಟು ನಿಷೇಧದ ನಂತರ ಆದಾಯ ತೆರಿಗೆ ಇಲಾಖೆ ಬೃಹತ್ ಮೊತ್ತದ ಕಪ್ಪುಹಣವನ್ನು ಬೇಟೆಯಾಡಿದೆ. ಇದರಲ್ಲಿ ಶೇ.20ರಷ್ಟು ಪಾಲು ಕರ್ನಾಟಕದ್ದು. ಐಟಿ ಇಲಾಖೆ, ಜಾರಿ ನಿರ್ದೇಶನಾಲಯಕ್ಕೆ ರೆಫರ್ ಮಾಡಿರುವ ಒಟ್ಟು 43 ಪ್ರಕರಣಗಳಲ್ಲಿ 23 ಕೇಸ್ ಗಳು ಕರ್ನಾಟಕದಲ್ಲಿ ದಾಖಲಾಗಿವೆ. ಅನುಮಾನಾಸ್ಪದ ಬಹುಮೊತ್ತದ ಡೀಲ್ ಗಳು ಹೆಚ್ಚಾಗಿ ನಡೆದಿರುವುದು ದೇಶದ ಟೆಕ್ ರಾಜಧಾನಿಯಲ್ಲಿ.

ಬೆಂಗಳೂರಲ್ಲಿ 2010-16ರವರೆಗೆ 2,47,002 ಕೋಟಿ ರೂಪಾಯಿ ಮೊತ್ತದ ಬೃಹತ್ ವಹಿವಾಟುಗಳು ನಡೆದಿವೆ. ಕಾನೂನು ಪ್ರಕಾರ ಎಲ್ಲೂ ಪ್ಯಾನ್ ನಂಬರ್ ನಮೂದಿಸಿಲ್ಲ. ಕಪ್ಪು ಹಣ ಹೆಚ್ಚಾಗಿ ಇರುವುದು ರಿಯಲ್ ಎಸ್ಟೇಟ್ ಕುಳಗಳ ಬಳಿ. ಹಾಗಾಗಿ ಪ್ರಾಪರ್ಟಿ ರಿಜಿಸ್ಟ್ರೇಶನ್ ಸಮಯದಲ್ಲಿ ಕಡ್ಡಾಯವಾಗಿ ಪ್ಯಾನ್ ನಂಬರ್ ನಮೂದಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದ್ರೂ ಪ್ಯಾನ್ ನಂಬರ್ ಹಾಕದೆ ಗೋಲ್ ಮಾಲ್ ಮಾಡಲಾಗಿದೆ.

ನವೆಂಬರ್ 9 ರಿಂದೀಚೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರಾಜ್ಯದಲ್ಲಿ ವಶಪಡಿಸಿಕೊಂಡಿರುವ 29.86 ಕೋಟಿ ರೂ. ಪೈಕಿ 20.22 ಕೋಟಿ ಮೌಲ್ಯದ ಹೊಸ 2000 ರೂ. ನೋಟುಗಳು ಸೇರಿವೆ. 41.6 ಕೆಜಿ ಚಿನ್ನದ ಬಿಸ್ಕೆಟ್ ಗಳು, 14 ಕೆಜಿ ಆಭರಣಗಳೂ ದಾಳಿ ವೇಳೆ ಸಿಕ್ಕಿವೆ. ಈ ಪಟ್ಟಿಗೆ ಇನ್ನೂ ಸೇರ್ಪಡೆಯಾಗುತ್ತಲೇ ಇದ್ದು, ಕಾಳದಂಧೆಕೋರರ ಮುಖವಾಡ ಬಯಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...