alex Certify
ಕನ್ನಡ ದುನಿಯಾ       Mobile App
       

Kannada Duniya

6 ರಾಜ್ಯಗಳಲ್ಲಿದ್ದಾರೆ ಅಗತ್ಯಕ್ಕಿಂತ ಹೆಚ್ಚು ವೈದ್ಯರು…!

ಒಂದು ಸಾವಿರ ಜನರಿಗೆ ಒಬ್ಬ ವೈದ್ಯ ಎಂಬ ವಿಶ್ವ ಆರೋಗ್ಯ ಸಂಸ್ಥೆ ನಿಯಮ 6 ರಾಜ್ಯಗಳಲ್ಲಿ ಪಾಲನೆಯಾಗುತ್ತಿಲ್ಲ. ಕರ್ನಾಟಕ, ದೆಹಲಿ, ಕೇರಳ, ತಮಿಳುನಾಡು, ಪಂಜಾಬ್‌ ಹಾಗೂ ಗೋವಾದಲ್ಲಿ ನಿಯಮಕ್ಕಿಂತ ಹೆಚ್ಚು ವೈದ್ಯರಿದ್ದಾರೆ ಎಂಬುದು ಬಹಿರಂಗವಾಗಿದೆ.

ದೇಶದ ವಿವಿಧ ಗ್ರಾಮೀಣ ಪ್ರದೇಶಗಳು, ಹಿಂದುಳಿದ ಭಾಗಗಳಲ್ಲಿ ಈ ಪ್ರದೇಶಗಳಲ್ಲಿರುವ ಹೆಚ್ಚುವರಿ ವೈದ್ಯರು ಸೇವೆ ಮಾಡಲು ಇಚ್ಛೆ ಪಡುವುದಿಲ್ಲ. ಬಿಹಾರ ಹಾಗೂ ಉತ್ತರ ಪ್ರದೇಶದ ವಿವಿಧ ಗ್ರಾಮಗಳಲ್ಲಿ ವೈದ್ಯರ ಕೊರತೆ ಹೆಚ್ಚಾಗಿದ್ದು, ಈ ಭಾಗಕ್ಕೆ ವೈದ್ಯಕೀಯ ಸೇವೆ ದುಸ್ತರವಾಗಿದೆ.

ತಮಿಳುನಾಡಿನಲ್ಲಿ ಪ್ರತಿ 1 ಸಾವಿರ ಮಂದಿಯ ಜನಸಂಖ್ಯೆಗೆ 4ರ ಅನುಪಾತ, ದೆಹಲಿಯಲ್ಲಿ 3, ಕೇರಳದಲ್ಲಿ 2.3 ರಿಂದ 2.8, ಕರ್ನಾಟಕದಲ್ಲಿ 1.5 ಹಾಗೂ ಪಂಜಾಬ್‌ ಹಾಗೂ ಗೋವಾದಲ್ಲಿ 1.3 ನಷ್ಟು ವೈದ್ಯರಿದ್ದಾರೆ.

ಹೆಚ್ಚಿನ ವೈದ್ಯರು ನಗರ ಪ್ರದೇಶಗಳಲ್ಲೇ ತಮ್ಮ ವೃತ್ತಿಜೀವನ ನಡೆಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ಸೇವೆ ನೀಡಲು ಸಿದ್ದರಾಗಿಲ್ಲ. ತಮಿಳುನಾಡು, ಕೇರಳದಲ್ಲಿ ಮಾತ್ರ ಗ್ರಾಮೀಣ ಭಾಗದ ವೈದ್ಯರ ಹುದ್ದೆಗಳು ಭರ್ತಿಯಾಗಿವೆ.

ಕರ್ನಾಟಕದಲ್ಲಿ ಶೇ.40 ರಷ್ಟು ವೈದ್ಯರು ಬೆಂಗಳೂರಲ್ಲೇ ಇದ್ದಾರೆ. ತಜ್ಞ ವೈದ್ಯರಿಗೂ ಬೆಂಗಳೂರಲ್ಲಿ ಕೆಲಸ ಸಿಗುವುದು ಕಷ್ಟಕರವಾಗಿದೆ. ವೈದ್ಯರಿಗೆ ಬೇಡಿಕೆ ಕಡಿಮೆಯಾಗುತ್ತಿದ್ದು, ವೇತನದ ಮಟ್ಟವೂ ಇಳಿಕೆಯಾಗುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯ ನಿಯಮ ಉಲ್ಲಂಘನೆಯಾಗಿರುವ ಎಲ್ಲ ರಾಜ್ಯಗಳಲ್ಲಿ ಎಂಬಿಬಿಎಸ್‌ ಸೀಟುಗಳ ಸಂಖ್ಯೆಯೂ ಅಧಿಕವಾಗಿದೆ. ಹೆಚ್ಚು ಜನ ಪದವೀಧರರಾಗುತ್ತಿದ್ದಾರೆ. ಹೆಚ್ಚು ವೈದ್ಯರು ತುರ್ತು ವಿಭಾಗದಲ್ಲಿ 6 ತಿಂಗಳ ಕಾಲ ಮಾಸಿಕ 40 ಸಾವಿರ ರೂ. ಗೆ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...