alex Certify
ಕನ್ನಡ ದುನಿಯಾ       Mobile App
       

Kannada Duniya

ದುರಂತ ಅಂತ್ಯ ಕಂಡಿದೆ ಫೇಸ್ಬುಕ್ ಪ್ರೇಮ ವೈಫಲ್ಯ

ಪ್ರೇಮ ವೈಫಲ್ಯದಿಂದ ನೊಂದು 21 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳೂರಿನ ದೀಕ್ಷಿತ್ ಸಾವಿಗೆ ಶರಣಾದ ವಿದ್ಯಾರ್ಥಿ. ಫೇಸ್ಬುಕ್ ನಲ್ಲಿ ದೀಕ್ಷಿತ್ ಗೆ ಯುವತಿಯೊಬ್ಬಳ ಪರಿಚಯವಾಗಿತ್ತು. ಆ ಸ್ನೇಹವೇ ಪ್ರೇಮಕ್ಕೆ ತಿರುಗಿತ್ತು.

ಇಬ್ಬರೂ ವಿದ್ಯಾರ್ಥಿಗಳು. ಪರಸ್ಪರ ಒಮ್ಮೆಯೂ ಭೇಟಿಯಾಗಿರಲಿಲ್ಲ, ಆದ್ರೆ ಫೋನ್ ಮೂಲಕ ನಿರಂತರ ಸಂಪರ್ಕದಲ್ಲಿದ್ರು. ತಮ್ಮ ಪ್ರೀತಿಗೆ ಮದುವೆಯ ಮುದ್ರೆ ಬೀಳುವುದು ಅಸಾಧ್ಯ ಎನಿಸಿದಾಗ ದೂರವಾಗಲು ನಿರ್ಧರಿಸಿದ್ರು.

ಆದ್ರೆ ಸ್ನೇಹಿತರಾಗಿಯೇ ಇರೋಣ ಎಂದು ತೀರ್ಮಾನಿಸಿದ್ರು. ದೀಕ್ಷಿತ್ ನಾಲ್ಕು ಪುಟಗಳ ಸೂಸೈಡ್ ನೋಟ್ ಬರೆದಿಟ್ಟಿದ್ದಾನೆ. ತನ್ನ ಆತ್ಮಹತ್ಯೆಗೆ ಯಾರೂ ಕಾರಣರಲ್ಲ ಅಂತಾನೂ ಬರೆದಿದ್ದಾನೆ. ನವೆಂಬರ್ 16ರಂದು ಗೇರುಮರಕ್ಕೆ ನೇಣುಬಿಗಿದುಕೊಂಡು ದೀಕ್ಷಿತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ದೀಕ್ಷಿತ್ ಗೆ ತಂದೆಯಿಲ್ಲ, ತಾಯಿ ಬೀಡಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಾಳೆ. ಜೀವನ ನಿರ್ವಹಣೆಗಾಗಿ ದೀಕ್ಷಿತ್ ಕೂಡ ಕಲ್ಲುಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ. ಫೇಸ್ಬುಕ್ ನಲ್ಲಿ ಯುವತಿಯ ಸಂಪರ್ಕಕ್ಕೂ ಮೊದಲೇ ಆತ ಖಿನ್ನತೆಯಿಂದ ಬಳಲುತ್ತಿದ್ದ ಅಂತಾ ಹೇಳಲಾಗ್ತಿದೆ, ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...