alex Certify
ಕನ್ನಡ ದುನಿಯಾ       Mobile App
       

Kannada Duniya

ಪರೀಕ್ಷೆ ತಪ್ಪಿಸಿಕೊಳ್ಳಲು ಅಪಹರಣದ ಕಥೆ ಕಟ್ಟಿದ ವಿದ್ಯಾರ್ಥಿ

980693-kidnapping-1446031659

ಪರೀಕ್ಷೆಗಳು ಸಮೀಪಿಸುತ್ತಿದ್ದಂತೆಯೇ ವಿದ್ಯಾರ್ಥಿಗಳಿಗೆ ತಳಮಳ ಆರಂಭವಾಗುತ್ತದೆ. ವರ್ಷವಿಡಿ ಓದಿದ್ದನ್ನು ಮನನ ಮಾಡಿಕೊಂಡು ಮೂರು ಗಂಟೆಯಲ್ಲಿ ಬರೆಯಬೇಕಾದ ಕಾರಣ ಪೂರ್ವ ಸಿದ್ದತೆ ಮಾಡಿಕೊಳ್ಳದವರಿಗಂತೂ ಇದು ಕಬ್ಬಿಣದ ಕಡಲೆಯೆನಿಸಿಬಿಡುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಈ ವಿದ್ಯಾರ್ಥಿ ಕಟ್ಟಿದ ಕಥೆ ಅಂತಿತದ್ದಲ್ಲ.

ಕೇರಳ ಮೂಲದ ಶ್ರೀಮಂತ ಬಿಲ್ಡರ್ ಒಬ್ಬರ ಪುತ್ರ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಪರೀಕ್ಷೆ ಆರಂಭವಾದ ದಿನ ತನ್ನ ತಾಯಿಗೆ ಸಂದೇಶವೊಂದನ್ನು ಕಳುಹಿಸಿ ತನ್ನನ್ನು ಅಪರಿಚಿತರು ಅಪಹರಿಸಿದ್ದು, ಹಣ ನೀಡಿದರೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆಂದಿದ್ದಾನಲ್ಲದೇ ತನಗೆ ತುಂಬಾ ಹಿಂಸೆ ನೀಡುತ್ತಿದ್ದಾರೆಂದು ತಿಳಿಸಿದ್ದಾನೆ.

ಇದರಿಂದ ತಳಮಳಗೊಂಡ ಆತನ ಪೋಷಕರು ದೌಡಾಯಿಸಿ ಬಂದಿದ್ದಾರೆ. ಠಾಣೆಯಲ್ಲಿ ದೂರು ದಾಖಲಿಸಿದ ವೇಳೆ ಪೊಲೀಸರು ವಿದ್ಯಾರ್ಥಿಯ ಪೂರ್ವಾಪರ ವಿಚಾರಣೆ ನಡೆಸಿದ್ದು, ಆಗ ವಿದ್ಯಾರ್ಥಿ ತರಗತಿಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲವೆಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಆತ ಸಂದೇಶ ಕಳುಹಿಸುತ್ತಿದ್ದುದು ತನ್ನದೇ ಲ್ಯಾಪ್ ಟಾಪ್ ನಿಂದ ಎಂಬುದೂ ಮನವರಿಕೆಯಾಗಿದೆ.

ವಿದ್ಯಾರ್ಥಿಯ ತಂದೆಗೆ ಆತನ ಖಾತೆಗೆ ಹಣ ಹಾಕುವಂತೆ ಪೊಲೀಸರು ತಿಳಿಸಿದ್ದಾರೆ. ಅದರಂತೆ ಹಣ ಹಾಕಿದಾಗ ಮಧುರೈ ಎಟಿಎಂ ಕೇಂದ್ರದಲ್ಲಿ ಡ್ರಾ ಮಾಡಿರುವುದು ಗೊತ್ತಾಗಿದೆ. ಕೂಡಲೇ ಧಾವಿಸಿದ ಪೊಲೀಸರು ವಿದ್ಯಾರ್ಥಿಯನ್ನು ಪತ್ತೆ ಹಚ್ಚಿದ್ದು ಈ ಸಂದರ್ಭದಲ್ಲಿ ಆತ ಈಗಷ್ಟೇ ಅಪಹರಣಕಾರರು ತನ್ನನ್ನು ಬಿಡುಗಡೆ ಮಾಡಿದ್ದಾಗಿ ಹೇಳಿದ್ದಾನೆ. ಆತನನ್ನು ಕರೆದುಕೊಂಡು ಬಂದ ಪೊಲೀಸರು ಸಮಗ್ರ ವಿಚಾರಣೆ ನಡೆಸಿದ ವೇಳೆ ಸತ್ಯಾಂಶ ಬಯಲಾಗಿದೆ. ತರಗತಿಗಳಿಗೆ ಸರಿಯಾಗಿ ಹಾಜರಾಗದ ಕಾರಣ ಪರೀಕ್ಷೆಗೆ ಕೂರಿಸುವುದಿಲ್ಲವೆಂಬ ಆತಂಕವೂ ವಿದ್ಯಾರ್ಥಿಯನ್ನು ಕಾಡಿದ್ದು, ಹೀಗಾಗಿ ಅಪಹರಣದ ಕಥೆ ಕಟ್ಟಿದ್ದನೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...