alex Certify
ಕನ್ನಡ ದುನಿಯಾ       Mobile App
       

Kannada Duniya

ಒಬ್ಬಳಿಗಾಗಿ ಇಬ್ಬರ ಬಡಿದಾಟ, ಮೂರನೆಯವನ ಜೊತೆ ಹೋದ್ಲು ಮಹಿಳೆ…!

ಬೆಂಗಳೂರು-ನೆಲಮಂಗಲ ಹೆದ್ದಾರಿಯಲ್ಲಿ ಓರ್ವ ಮಹಿಳೆಗಾಗಿ ಇಬ್ಬರು ಪುರುಷರು ಈಕೆ ನನ್ನ ಹೆಂಡತಿ, ನನ್ನ ಹೆಂಡತಿ ಎಂದು ಹೊಡೆದಾಡಿಕೊಂಡ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮಹಿಳೆ ಇಬ್ಬರನ್ನೂ ವಿವಾಹವಾಗಿರಲಿಲ್ಲವೆಂಬ ಸಂಗತಿ ಪೊಲೀಸ್ ವಿಚಾರಣೆ ವೇಳೆ ಬಹಿರಂಗವಾಗಿದ್ದು, ವಿಚಾರಣೆ ಬಳಿಕ ಆಕೆ ಮೂರನೇ ವ್ಯಕ್ತಿ ಜೊತೆ ಠಾಣೆಯಿಂದ ತೆರಳಿದ್ದಾಳೆ.

38 ವರ್ಷದ ಶಶಿಕಲಾ ಎಂಬ ಈ ಮಹಿಳೆ 2000 ರಲ್ಲಿ ರಂಗಸ್ವಾಮಿ ಎಂಬಾತನ ಜೊತೆ ವಿವಾಹವಾಗಿದ್ದು, 2010 ರಲ್ಲಿ ಆತನನ್ನು ತೊರೆದು ರಮೇಶ್ ಕುಮಾರ್ ಎಂಬಾತನ ಜೊತೆ ವಾಸಿಸುತ್ತಿದ್ದಳು. ನಂತರ ಆತನನ್ನೂ ತೊರೆದು ಚಿಕ್ಕಬಿದರಕಲ್ಲು ಮೂರ್ತಿ ಎಂಬ ವಿವಾಹಿತನ ಜೊತೆ ಸಂಬಂಧ ಬೆಳೆಸಿದ್ದಳು. ಈ ಮಧ್ಯೆ ಸಿದ್ದರಾಜು ಎಂಬ ಕ್ಯಾಬ್ ಚಾಲಕ ಶಶಿಕಲಾಗೆ ಆತ್ಮೀಯನಾಗಿದ್ದು, ಅವಿವಾಹಿತನಾಗಿದ್ದ ಆತ, ಆಕೆಯ ಮುಂದೆ ಮದುವೆ ಪ್ರಸ್ತಾಪವನ್ನು ಇಟ್ಟಿದ್ದಾನೆ.

ಇದಕ್ಕೆ ಶಶಿಕಲಾ ಕೂಡಾ ಸಮ್ಮತಿಸಿದ್ದು, ಆದರೆ ಇದರಿಂದ ಆಕ್ರೋಶಗೊಂಡ ಚಿಕ್ಕಬಿದರಕಲ್ಲು ಮೂರ್ತಿ ಶನಿವಾರದಂದು ಶಶಿಕಲಾಳ ಜೊತೆ ಬಾವಿಕೆರೆ ಕ್ರಾಸ್ ನಲ್ಲಿ ನಿಂತಿದ್ದ ಸಿದ್ದರಾಜು ಮೇಲೆ ಹಲ್ಲೆ ನಡೆಸಿದ್ದಾನೆ. ಶಶಿಕಲಾಗಾಗಿ ನಡೆದ ಇವರಿಬ್ಬರ ಹೊಡೆದಾಟ ದಾರಿಹೋಕರಿಗೆ ಪುಕ್ಕಟೆ ಮನೋರಂಜನೆ ನೀಡಿದೆ. ವಿಷಯ ಪೊಲೀಸರಿಗೂ ಮುಟ್ಟಿದ್ದು, ಸ್ಥಳಕ್ಕಾಗಮಿಸಿದ ಅವರು, ಸಿದ್ದರಾಜು ಹಾಗೂ ಚಿಕ್ಕಬಿದರಕಲ್ಲು ಮೂರ್ತಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರೆ, ಶಶಿಕಲಾ ಮತ್ತೊಬ್ಬ ಸ್ನೇಹಿತನೊಂದಿಗೆ ಠಾಣೆಯಿಂದ ತೆರಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...